ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಾದ ಅವೈಜ್ಞಾನಿಕ

Last Updated 12 ಅಕ್ಟೋಬರ್ 2018, 20:15 IST
ಅಕ್ಷರ ಗಾತ್ರ

‘ಗಂಗೆಯನ್ನು ಕಟ್ಟಿ ಹಾಕುವಿರೇಕೆ?’ (ಸಂಗತ, ಅ. 8) ಎಂಬ ಲೇಖನಕ್ಕೆ ಈ ಪ್ರತಿಕ್ರಿಯೆ.

‘ಗಂಗಾ ನದಿಗೆ ಅಣೆಕಟ್ಟು ಕಟ್ಟುವುದರಿಂದ ಮತ್ತು ಆ ನೀರಿನಿಂದ ವಿದ್ಯುತ್ ಉತ್ಪಾದಿಸುವುದರಿಂದ ನೀರಿನ ನೈಸರ್ಗಿಕ ಗುಣ ನಾಶವಾಗುತ್ತದೆ’ ಎಂಬ ಭಾವನೆಯನ್ನು ಲೇಖನದಲ್ಲಿ ವ್ಯಕ್ತಪಡಿಸಲಾಗಿದೆ. ಆದರೆ, ಇದಕ್ಕೆ ವಿಜ್ಞಾನದ ಆಧಾರವಿಲ್ಲ. ಕೃಷ್ಣದೇವರಾಯನ ಕಾಲದಲ್ಲಿ ತುಂಗಭದ್ರಾ ನದಿಗೆ ನಿರ್ಮಿಸಿದ ಚಿಕ್ಕ ಚಿಕ್ಕ ಅಣೆಕಟ್ಟುಗಳು, 500 ವರ್ಷಗಳಿಂದ ವ್ಯವಸಾಯದ ಅಭಿವೃದ್ಧಿಗೆ ಪೂರಕವಾಗಿವೆ ಎಂಬುದನ್ನು ಮರೆಯಬಾರದು.

ಗಂಗಾನದಿಯನ್ನು ಶುದ್ಧಗೊಳಿಸಲು ಬೇರೆ ಕೆಲವು ಪರಿಹಾರೋಪಾಯಗಳಿವೆ. ನದಿಯ ಜಲಾನಯನ ಪ್ರದೇಶದಲ್ಲಿ ಇಂಗುಗುಂಡಿಗಳನ್ನು ನಿರ್ಮಿಸುವುದು ಮತ್ತು ನದಿಯ ಎರಡೂ ಬದಿಯಲ್ಲಿ ಒಂದು ಕಿ.ಮೀ. ವ್ಯಾಪ್ತಿಯಲ್ಲಿ ಮರಗಳನ್ನು ಬೆಳೆಸುವುದರಿಂದ ಜಲಮಾಲಿನ್ಯ ಕಡಿಮೆ ಮಾಡಬಹುದು.

ಪ್ರವಾಹಗಳು ಸಂಭವಿಸಿ ಆಸ್ತಿಪಾಸ್ತಿ ಹಾನಿಯಾಗುವುದನ್ನು ಚಿಕ್ಕ ಚಿಕ್ಕ ಅಣೆಕಟ್ಟುಗಳು ತಡೆಯುತ್ತವೆ. ಕೃಷಿ ಅಭಿವೃದ್ಧಿ, ಅಂತರ್ಜಲ ಹೆಚ್ಚಳಕ್ಕೆ ಇವು ಸಹಕಾರಿ. ಜನರಿಗೆ ಕುಡಿಯುವ ನೀರು ಪೂರೈಕೆ, ಜಲಸಾರಿಗೆ ಮತ್ತು ವಿದ್ಯುತ್ ಉತ್ಪಾದನೆಗೂ ಈ ನದಿಯ ನೀರನ್ನು ಉಪಯೋಗಿಸಬಹುದು. ಇದನ್ನು ಬಿಟ್ಟು, ಪೂರ್ಣ ನೀರನ್ನು ಸಮುದ್ರಕ್ಕೆ ಬಿಡುವುದರಿಂದ ಸಮಾಜಕ್ಕೆ ಯಾವ ಲಾಭವೂ ಇಲ್ಲ.

ಡಾ. ಎಚ್.ಆರ್. ಪ್ರಕಾಶ್, ಬೆಂಗಳೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT