ಇದೇನು ರಾಜಾಡಳಿತವೇ?

7

ಇದೇನು ರಾಜಾಡಳಿತವೇ?

Published:
Updated:

ಕುಮಾರಸ್ವಾಮಿ ಅವರು ಮುಖ್ಯಮಂತ್ರಿ ಆದಮೇಲೆ ರಾಜ್ಯದ ಜನರು ಆಗಾಗ ವಿಪರೀತ ಕಿರಿಕಿರಿ ಅನುಭವಿಸುವಂತಾಗಿದೆ. ಕಳೆದ ತಿಂಗಳಲ್ಲಿ ನಡೆದ ಜೆಡಿಎಸ್‌ ಸಮಾವೇಶದ ಸಂದರ್ಭದಲ್ಲಿ ಮಂಡ್ಯ– ಮೈಸೂರು ಹೆದ್ದಾರಿಯನ್ನು ಹಲವು ಗಂಟೆಗಳ ಕಾಲ ಬಂದ್ ಮಾಡಿ ಜನರಿಗೆ ತೊಂದರೆ ಕೊಡಲಾಗಿತ್ತು.

ಇತ್ತೀಚೆಗೆ ಕುಮಾರಸ್ವಾಮಿ ಅವರು ಧರ್ಮಸ್ಥಳ- ಕುಕ್ಕೆ ಕ್ಷೇತ್ರಗಳಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಮೂಡಿಗೆರೆಯ ಬಳಿ ರಸ್ತೆಪ್ರಯಾಣಿಕರನ್ನು ಹಲವು ಗಂಟೆಗಳ ಕಾಲ ತಡೆದು ನಿಲ್ಲಿಸಿದ್ದು ವರದಿಯಾಗಿದೆ. ಆ ಭಾಗದಲ್ಲಿ ವಿಪರೀತ ಮಳೆ ಸುರಿಯುತ್ತಿದೆ.

ಮಕ್ಕಳು–ಮರಿಗಳು, ವಯೋವೃದ್ಧರನ್ನು ಕರೆದುಕೊಂಡು ಹೋಗುತ್ತಿದ್ದ ಪ್ರಯಾಣಿಕರನ್ನು ಮಳೆ–ಚಳಿಯಲ್ಲಿ ನಡುಗುವಂತೆ ಮಾಡಿ ಇವರು ಯಾವ ಪುಣ್ಯ ಸಂಪಾದನೆ ಮಾಡುತ್ತಾರೆ? ಅವರ ಶ್ರದ್ಧೆ - ನಂಬಿಕೆಗಳು ವೈಯಕ್ತಿಕವಾದವು ಮತ್ತು ಪ್ರಶ್ನಾತೀತ. ಆದರೆ ಅದಕ್ಕಾಗಿ ಜನಸಾಮಾನ್ಯರಿಗೆ ಹಿಂಸೆ ನೀಡುವುದು ಸರಿಯೇ? ಮಲೆನಾಡು ಭಾಗದಲ್ಲಿನ ರಸ್ತೆಗಳು ಸಹ ಹದಗೆಟ್ಟಿವೆ. ಇಂತಹ ಸಂದರ್ಭದಲ್ಲಿ ಇರುವ ಕೆಲವೇ ರಸ್ತೆಗಳನ್ನು ಮುಖ್ಯಮಂತ್ರಿಗಳ ‘ಸುಖ-ಸರಾಗ ಪಯಣ’ಕ್ಕೆ ಮೀಸಲಿಡುವುದಾದರೆ ಜನರು ಏನು ಮಾಡಬೇಕು? ಜನಪ್ರತಿನಿಧಿಗಳ ಇಂಥ ನಡೆ ರಾಜಪ್ರಭುತ್ವವನ್ನು ನೆನಪಿಸುವಂತಿದೆ!
 

ಬರಹ ಇಷ್ಟವಾಯಿತೆ?

 • 3

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !