ಭಾನುವಾರ, ಸೆಪ್ಟೆಂಬರ್ 19, 2021
23 °C

ತಲೆದಂಡ ಅನಿರೀಕ್ಷಿತವಲ್ಲ

ವಾಚಕರ ವಾಣಿ Updated:

ಅಕ್ಷರ ಗಾತ್ರ : | |

ಹಲವು ದಿನಗಳಿಂದ ರಾಜ್ಯ ರಾಜಕಾರಣದಲ್ಲಿ ಹೆಚ್ಚು ಚರ್ಚೆಗೆ ಗ್ರಾಸವಾಗಿದ್ದ ಬಿ.ಎಸ್.ಯಡಿಯೂರಪ್ಪ ಅವರ ಪದತ್ಯಾಗದ ವಿಚಾರ, ಕೊನೆಗೆ ಸೋಮವಾರ ಅವರು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡುವುದರ ಮೂಲಕ ಅಂತ್ಯಗೊಂಡಿದೆ. ಹೋರಾಟದ ಹಿನ್ನೆಲೆಯಿಂದ ಬಂದ ಯಡಿಯೂರಪ್ಪ ತಮ್ಮ ಪದತ್ಯಾಗದ ಮೂಲಕ ರಾಜಕಾರಣದ ಮುಸ್ಸಂಜೆಯಲ್ಲಿ ಮಹತ್ವದ ತಿರುವಿಗೆ ಕಾರಣರಾಗಿದ್ದಾರೆ.

ರಾಜ್ಯ ಬಿಜೆಪಿಯಲ್ಲಿ ಎರಡರಷ್ಟಿದ್ದ ಶಾಸಕರ ಸಂಖ್ಯೆಯನ್ನು ಬಹುಮತದ ಸರ್ಕಾರದತ್ತ ತಂದಿದ್ದು ಅವರ ಹೆಗ್ಗಳಿಕೆ. ಹಲವು ವರ್ಷಗಳ ಕಾಲ ವಿರೋಧ ಪಕ್ಷದ ನಾಯಕರಾಗಿ ಹೆಚ್ಚು ಗುರುತಿಸಿಕೊಂಡಿದ್ದ ಅವರದು ರಾಜ್ಯ ರಾಜಕಾರಣ ಕಂಡ ಅಪರೂಪದ ವ್ಯಕ್ತಿತ್ವ. ಹೈಕಮಾಂಡ್ ನಿರ್ದೇಶನದಂತೆ ಮುಖ್ಯ ಮಂತ್ರಿ ಸ್ಥಾನ ತ್ಯಜಿಸಿರುವ ಯಡಿಯೂರಪ್ಪ ಅವರು ಅದಕ್ಕೂ ಮುನ್ನ ಭಾವುಕರಾಗಿ ಕಣ್ಣೀರು ಹಾಕಿರುವುದು, ಪದತ್ಯಾಗ ಅವರಿಗೆ ಇಷ್ಟವಿರಲಿಲ್ಲ ಎಂಬುದನ್ನು ತೋರಿಸುತ್ತದೆ. ಆದರೆ, ಬಿಜೆಪಿಯ ತತ್ವ-ಸಿದ್ಧಾಂತದ ಅನ್ವಯ 75 ವರ್ಷ ಮೇಲ್ಪಟ್ಟವರು ರಾಜಕೀಯ ನಿವೃತ್ತಿ ಪಡೆದುಕೊಳ್ಳಬೇಕೆಂಬುದರ ಆಧಾರದ ಮೇಲೆ ಅವರ ತಲೆದಂಡವಾಗುತ್ತಿರುವುದು ಅನಿರೀಕ್ಷಿತವೇನಲ್ಲ.

ರಾಜ್ಯ ರಾಜಕೀಯದಲ್ಲಿ ಗಣನೀಯ ಪ್ರಭಾವ ಹೊಂದಿರುವ ಲಿಂಗಾಯತ ಸಮುದಾಯದಿಂದ ಬಂದ ಯಡಿಯೂರಪ್ಪ ಅವರು, ತಮ್ಮದೇ ಆದ ವರ್ಚಸ್ಸನ್ನು ಗಳಿಸಿಕೊಂಡವರು. ಅವರ ಸ್ಥಾನವನ್ನು ತುಂಬುವ ಮತ್ತೊಬ್ಬ ರಾಜಕಾರಣಿ ರಾಜ್ಯ ಬಿಜೆಪಿಯಲ್ಲಿ ಇದ್ದಾರೆಯೇ ಎಂಬ ಪ್ರಶ್ನೆ ಸಹಜವಾಗಿ ಎಲ್ಲರನ್ನೂ ಕಾಡುತ್ತದೆ.

- ಶ್ರೀಧರ್ ಡಿ. ರಾಮಚಂದ್ರಪ್ಪ, ತುರುವನೂರು, ಚಿತ್ರದುರ್ಗ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು