ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಾಚಕರ ವಾಣಿ: ಆಕಾಶಕ್ಕೇ ಕಾಯಿಲೆ ಬಂದಿದೆ!

Last Updated 15 ನವೆಂಬರ್ 2020, 19:30 IST
ಅಕ್ಷರ ಗಾತ್ರ

ಬೆಂಗಳೂರಿನ ಬಾಪೂಜಿ ನಗರದಲ್ಲಿ ಸ್ಯಾನಿಟೈಸರ್‌ ದ್ರವ್ಯಗಳನ್ನಿಟ್ಟಿದ್ದ ಗೋದಾಮಿಗೆ ಬೆಂಕಿಬಿದ್ದು ಆಕಾಶದೆತ್ತರಕ್ಕೆ ಕಪ್ಪು ಹೊಗೆ ಏರಿದ್ದರಿಂದಾಗಿ ಮಹಾನಗರಪಾಲಿಕೆಯ ಬೇಜವಾಬ್ದಾರಿಯ ಬಗ್ಗೆ ಟೀಕೆಗಳು ಬಂದಿವೆ. ಈ ನಗರದಲ್ಲಿ ದಿನವೂ ಇಂಥದ್ದು ಆಗುತ್ತಿದೆ. ಕೋವಿಡ್‌ ಶುಷ್ರೂಷೆ ನಡೆಯುವ ಆಸ್ಪತ್ರೆಗಳಿಂದ ದಿನವೂ ಟನ್‌ಗಟ್ಟಲೆ ಪ್ಲಾಸ್ಟಿಕ್‌ತ್ಯಾಜ್ಯಗಳನ್ನು (ವೈದ್ಯಸಿಬ್ಬಂದಿಯ ಪಿಪಿಇ, ಜೊತೆಗೆ ರೋಗಿಗಳು ಬಳಸಿದ್ದ ನೀರಿನ ಬಾಟಲಿ, ಚೊಂಬು, ಬಕೆಟ್ಟು ಎಲ್ಲವನ್ನೂ) ಸುತ್ತಿ ಒಯ್ದು ಸುಡುಗೂಡುಗಳಲ್ಲಿ ಅಗ್ನಿಸಂಸ್ಕಾರ ಮಾಡಲಾಗುತ್ತಿದೆ. ಇದ್ಯಾವ ಲೋಕದ ಜಾಣ್ಮೆ? ಕೊರೊನಾ ವೈರಾಣು ಮನುಷ್ಯರ ಸಂಪರ್ಕ ಇಲ್ಲದಿದ್ದರೆ ಅರ್ಧ ದಿನದಲ್ಲಿ ಸಾಯುತ್ತದೆ. ಸೋಂಕಿತರ ಪ್ಲಾಸ್ಟಿಕ್‌ ತ್ಯಾಜ್ಯಗಳನ್ನೆಲ್ಲ ಯಂತ್ರಗಳ ಮೂಲಕ ಗಟ್ಟಿ ಗ್ರಾನೈಟ್‌ ಬಂಡೆಗಳ ಹಾಗೆ ಒತ್ತಿ ಗೋದಾಮಿನಲ್ಲಿ ಇಡಬಹುದು (ವಿದೇಶಗಳಿಂದ ನಮಗೆ ಬರುವ ಪ್ಲಾಸ್ಟಿಕ್‌ ತ್ಯಾಜ್ಯಗಳೆಲ್ಲ ಅಂಥ ಬಂಡೆಗಳ ರೂಪದಲ್ಲೇ ಬರುತ್ತವೆ). ಒಂದಿಡೀ ವರ್ಷ ಅವುಗಳನ್ನು ಗೋದಾಮಿನಲ್ಲಿ ಕೂಡಿಟ್ಟು, ಆಮೇಲೆ ಪರೀಕ್ಷೆ ಮಾಡಿ ಮತ್ತೆ ಅವನ್ನೆಲ್ಲ ದ್ರವೀಕರಿಸಿ ಬಕೆಟ್ಟು, ಚೊಂಬು, ಕುರ್ಚಿ, ಮಂಚ, ಪಿಪಿಇಗಳನ್ನು ತಯಾರಿಸಬಹುದಲ್ಲ? ಬಳಸಿ ಬಿಸಾಕಿದ ಪಿಪಿಇಗಳನ್ನು ಅದೇ ದಿನವೇ ಸಂಸ್ಕರಿಸಿ ಮರುಬಳಕೆಗೆ ತರಬಲ್ಲ ತಂತ್ರಗಳು ಸ್ವೀಡನ್ನಿನಲ್ಲಿ, ಅಮೆರಿಕದ ಸ್ಟಾನ್‌ಫೋರ್ಡ್‌ನಲ್ಲಿ ಜಾರಿಗೆ ಬಂದಿವೆ. ನಮ್ಮಲ್ಲಿಗೆ ಬಾರವೆ? ಕೊರೊನಾಪೀಡಿತ ವಿವಿಐಪಿಗಳನ್ನು ಸಾಗಿಸಲೆಂದು ಜರ್ಮನಿಯಿಂದ ಶರವೇಗದಲ್ಲಿ ವಿಶೇಷ
ಏರೊಪಾಡ್‌ಗಳನ್ನು ತರಿಸಿಕೊಂಡ ನಮ್ಮ ಸರ್ಕಾರ ಈ ತಂತ್ರಜ್ಞಾನವನ್ನೂ ತರಿಸಿಕೊಳ್ಳಬಹುದಲ್ಲವೆ? ಆಕಾಶವೇ ಕಾಯಿಲೆ ಬಿದ್ದಿದೆ!

-ನಾಗೇಶ ಹೆಗಡೆ,ಕೆಂಗೇರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT