ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಾಚಕರ ವಾಣಿ: ‘ರಂಭಾ ಗಾಳ’ಕ್ಕೆ ಬಲಿಬಿದ್ದರು!

Last Updated 2 ಮೇ 2022, 19:30 IST
ಅಕ್ಷರ ಗಾತ್ರ

ವಿಶ್ವಾಮಿತ್ರ ಎಂಬ ಮುನಿ ತನ್ನ ತಪಸ್ಸು ಫಲಿಸುವ ಮುನ್ನವೇ ವಿಧಿಯ ಕೈವಾಡದಿಂದ ರಂಭೆ ಎಂಬ ಗಾಳಕ್ಕೆ ಬಲಿಬೀಳಬೇಕಾಗುತ್ತದೆ. ಅದರಂತೆಯೇ ಪಿಎಸ್‌ಐ ಅಭ್ಯರ್ಥಿಗಳು ವರ್ಷಗಟ್ಟಲೇ ಕಷ್ಟಪಟ್ಟು ಓದಿ, ಸ್ಪರ್ಧಾತ್ಮಕ ಪರೀಕ್ಷೆ ಬರೆದು ಯಶಸ್ವಿಯಾಗಿ, ಇನ್ನೇನು ಯಶಸ್ಸಿನ ಫಲ ಕೈಗೆ ಎಟಕುತ್ತದೆ ಎನ್ನುವ ಹೊತ್ತಿಗೆ ವ್ಯವಸ್ಥೆಯ ‘ರಂಭಾ ಗಾಳ’ಕ್ಕೆ ಬಲಿಯಾಗಿದ್ದಾರೆ. ವ್ಯವಸ್ಥೆ ನಿರ್ದಯವಾಗಿ ಮತ್ತೊಮ್ಮೆ ಪರೀಕ್ಷೆ ಬರೆಸಲು ಮುಂದಾಗಿರುವುದು ವಿಪರ್ಯಾಸ.

ಸರ್ಕಾರದಲ್ಲಿರುವ ‘ದೊಡ್ಡವರು’ ಮರುಪರೀಕ್ಷೆ ಪರವಾಗಿ ಮಾತನಾಡುತ್ತಿದ್ದಾರೆ. ಪ್ರಜ್ಞಾವಂತರು ಗಂಟಲಲ್ಲಿ ಕಡುಬು ತುರುಕಿಸಿಕೊಂಡಿದ್ದಾರೆ. ಮತ್ತೊಮ್ಮೆ ಪರೀಕ್ಷೆ ಬರೆಯುವುದು ಸಾಮಾನ್ಯ ಕೆಲಸವೇ? ಈಗಾಗಲೇ ಪಾಸಾ ದವರು (ನ್ಯಾಯವಾಗಿ) ಅದೇ ಮನಃಸ್ಥಿತಿಯಲ್ಲಿ ಇರುತ್ತಾರೆಯೇ? ಒಮ್ಮೆ ರಿಲ್ಯಾಕ್ಸ್‌ ಆದ ಮನಸ್ಸು ಮತ್ತದೇ ಒತ್ತಡಕ್ಕೆ ಸಿಲುಕಿ ಸಿದ್ಧಗೊಳ್ಳುವುದು ಅಷ್ಟು ಸುಲಭವೇ? ಕೆಲವು ಹಳ್ಳಿಗಳಲ್ಲಿ ಜಾತಿಭೇದ ಮರೆತು ಪ್ರೀತಿಯಿಂದ ಮಾಡಿದ ಸಮ್ಮಾನಗಳನ್ನು ಅಭ್ಯರ್ಥಿಗಳು ಈಗ ಹಿಂದಿರುಗಿಸಲು ಸಾಧ್ಯವೇ? ಎಂತಹ ಮಮ್ಮಲ ಮರುಗುವ ಸ್ಥಿತಿಗೆ ನಮ್ಮನ್ನು ನೂಕಿದೆ ನಮ್ಮ ವ್ಯವಸ್ಥೆ? ಆದರೂ ಪ್ರಜಾಪ್ರಭುತ್ವದಲ್ಲಿ ನಂಬಿಕೆ ಇಟ್ಟಿರುವ ನಾವು ಈಗ ನಡೆಯುತ್ತಿರುವ ವಿಚಾರಣೆ ‘ದೊಡ್ಡವರನ್ನೂ’, ‘ಸರ್‌’ಗಳನ್ನೂ ಕರ್ನಾಟಕದ ಪ್ರಜೆಗಳೆದುರು ತಂದು ನಿಲ್ಲಿಸುತ್ತದೆಂಬ ವಿಶ್ವಾಸ ಹೊಂದೋಣ. ಅಭ್ಯರ್ಥಿಗಳು ಯಾವ ಹಂತದಲ್ಲೂ ಆತ್ಮವಿಶ್ವಾಸ ಕಳೆದುಕೊಳ್ಳಬಾರದು ಅಲ್ಲದೆ ಮರುಪರೀಕ್ಷೆಗೆ ಸಿದ್ಧರಾಗಬೇಕು.

- ಕಾಂತೇಶ ಕದರಮಂಡಲಗಿ,ಶಿವಮೊಗ್ಗ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT