ಭಾನುವಾರ, ಮೇ 22, 2022
22 °C

ವಾಚಕರವಾಣಿ: ಸಚಿವ ಸ್ಥಾನ ತ್ಯಜಿಸಿಲ್ಲವೇಕೆ?

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹಿಂದೆ ಪ್ರಧಾನಿ ಲಾಲ್ ಬಹದ್ದೂರ್ ಶಾಸ್ತ್ರಿ ಅವರು ರೈಲ್ವೆ ಸಚಿವರಾಗಿದ್ದಾಗ ರೈಲೊಂದು ಅಪಘಾತಕ್ಕೀಡಾ
ದ್ದರಿಂದ ನೈತಿಕ ಹೊಣೆ ಹೊತ್ತು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದು ಇತಿಹಾಸದ ಪುಟಗಳಲ್ಲಿ ಇಂದಿಗೂ ಜೀವಂತಿಕೆ ಉಳಿಸಿಕೊಂಡಿದೆ. ಅವರ ಆದರ್ಶ, ತ್ಯಾಗ ಅನುಕರಣೀಯ. ಆದರೆ ಅವರನ್ನು ಅನುಸರಿಸುವ ರಾಜಕಾರಣಿಗಳು ಯಾರಾದರೂ ಇದ್ದಾರೆಯೇ? ನೂರಕ್ಕೆ ನೂರು ಇಲ್ಲ ಎಂಬುದೇ ಉತ್ತರವಾಗಿದೆ.

ಸರ್ಕಾರ ನಡೆಸುವ ಯಾರೊಬ್ಬರಿಗೂ ನ್ಯಾಯ, ನೀತಿ, ಧರ್ಮ ಬೇಡವಾಗಿವೆ. ತಮ್ಮ ಪಕ್ಷದವರು ಅತ್ಯಾಚಾರ ಮಾಡಿದರೂ ಕೊಲೆಯನ್ನೇ ಮಾಡಿದರೂ ಅಂತಹವರ ಪರ ನಿಲ್ಲುವುದು ಅಲಿಖಿತ ಒಪ್ಪಂದವಾಗಿ ಬಿಟ್ಟಿದೆ. ಲಖಿಂಪುರ– ಖೇರಿ ಪ್ರಕರಣದಲ್ಲಿ ಈಗ ನಡೆಯುತ್ತಿರುವುದು ಇದಕ್ಕೆ ಜ್ವಲಂತ ಸಾಕ್ಷಿ. ಆರೋಪಿ ಸ್ಥಾನದಲ್ಲಿ ಇರುವ ಕೇಂದ್ರ ಸಚಿವರೊಬ್ಬರ ಮಗನನ್ನು ಉಳಿಸಲು, ನಡೆದ ಘಟನೆಯನ್ನೇ ಬುಡಮೇಲು ಮಾಡಹೊರಟಿರುವುದು ನಿಜಕ್ಕೂ ಪ್ರಜಾಪ್ರಭುತ್ವದ ಕಗ್ಗೊಲೆಯೇ ಸರಿ. ಮಗನ ಮೇಲೆ ಗಂಭೀರ ಆರೋಪವಿದ್ದರೂ ತಮ್ಮ ಸ್ಥಾನವನ್ನು ತ್ಯಜಿಸದೇ ಇರುವುದಕ್ಕೆ ಏನನ್ನಬೇಕು? ಅಂತಹ ಸಚಿವರನ್ನು ಪ್ರಧಾನಿ ತಮ್ಮ ಸಂಪುಟದಲ್ಲಿ ಇನ್ನೂ ಉಳಿಸಿಕೊಂಡಿರುವುದು ನಾಡಿನ ದುರ್ದೈವವೇ ಸರಿ.

- ಪ್ರಕಾಶ್ ಮಲ್ಕಿಒಡೆಯರ್, ಹೂವಿನಹಡಗಲಿ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು