ಭಾನುವಾರ, ನವೆಂಬರ್ 27, 2022
25 °C

ವಾಚಕರ ವಾಣಿ: ಸಾಕಾರಗೊಳಿಸುವ ಇಚ್ಛಾಶಕ್ತಿ ಬೇಕು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಭೂಪರಿವರ್ತನೆ ತಿದ್ದುಪಡಿ ಮಸೂದೆಯನ್ನು ಸುಗ್ರೀವಾಜ್ಞೆಯ ಮೂಲಕ ಜಾರಿಗೊಳಿಸಲು ಸರ್ಕಾರ ನಿರ್ಧರಿಸಿದೆ ಎಂದು ಕಂದಾಯ ಸಚಿವರು ಹೇಳಿದ್ದಾರೆ. ತಿದ್ದುಪಡಿಯ ಅಗತ್ಯವೂ ಇದೆ. ಆದರೆ ಮಸೂದೆಯು ವಿಧಾನಮಂಡಲದಲ್ಲಿ ವಿಸ್ತೃತವಾಗಿ ಚರ್ಚೆಗೆ ಒಳಗಾಗಿದ್ದರೆ ಅದರ ಸಾಧಕ–ಬಾಧಕಗಳು ಬೆಳಕು ಕಾಣುತ್ತಿದ್ದವು. ಸುಗ್ರೀವಾಜ್ಞೆಯು ತುರ್ತು ಸಂದರ್ಭಗಳಿಗಷ್ಟೇ ಸೀಮಿತ ಆಗಿರಬೇಕು. 

ಕೃಷಿ ಭೂಮಿಯನ್ನು ಕೃಷಿಯೇತರ ಉದ್ದೇಶಗಳಿಗೆ ಪರಿವರ್ತನೆ ಮಾಡಿಸಿಕೊಳ್ಳಲು ಅರ್ಜಿ ನೀಡಿದ ಏಳು ದಿನಗಳಲ್ಲಿ ಅದನ್ನು ಇತ್ಯರ್ಥಗೊಳಿಸಲಾಗುವುದು ಎಂದು ಸಚಿವರು ಹೇಳಿದ್ದಾರೆ. ಉದ್ದೇಶ ಒಳ್ಳೆಯದು. ಅದನ್ನು ಸಾಕಾರಗೊಳಿಸುವ ಇಚ್ಛಾಶಕ್ತಿ ಸರ್ಕಾರಕ್ಕೆ ಇರಬೇಕು. ಇಲ್ಲದೇ ಹೋದರೆ ಬರೀ ಆದರ್ಶದ ಒಣಮಾತಾಗಿ ಮಾತ್ರ ಉಳಿಯುತ್ತದೆ. 

⇒ನಾಗರಾಜು ಎನ್‌.ಎಂ., ದಾವಣಗೆರೆ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು