ಬುಧವಾರ, ಆಗಸ್ಟ್ 10, 2022
24 °C

ವಾಚಕರ ವಾಣಿ: ಮನುಷ್ಯ ಸಾಯುವುದಕ್ಕಿಂತ ಮುಂಚೆ...

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಆಸ್ಪತ್ರೆಯಲ್ಲಿ ಹಾಸಿಗೆ ಬ್ಲಾಕಿಂಗ್ ದಂಧೆ, ರೆಮಿಡಿಸಿವಿರ್ ಮಾತ್ರೆ ಕಾಳಸಂತೆಯಲ್ಲಿ ಮಾರಾಟ, ಆಮ್ಲಜನಕ ಸರಬರಾಜು ಮಾಡಲು ಜಿಲ್ಲಾಡಳಿತಗಳ ಕಿತ್ತಾಟ, ಪೂರ್ತಿ ಹಣ ಪಾವತಿ ಮಾಡದಿದ್ದಕ್ಕೆ ಶವ ಕೊಡಲು ನಿರಾಕರಣೆ, ಶವ ಸಾಗಿಸುವ ಆಂಬುಲೆನ್ಸ್‌ನ ದುಬಾರಿ ಶುಲ್ಕ ಪಾವತಿಗಾಗಿ ತಾಳಿ ಮಾರಾಟ, ಆಹಾರಧಾನ್ಯ ಕೇಳಿದ್ದಕ್ಕೆ ‘ಸಾಯುವುದೇ ಒಳ್ಳೆಯದು’ ಎಂದ ಮಂತ್ರಿ... ಇದನ್ನೆಲ್ಲ ನೋಡುತ್ತಿದ್ದರೆ, ಮನುಷ್ಯ ಸಾಯುವುದಕ್ಕೆ ಮುಂಚೆ ಮನುಷ್ಯತ್ವ ಸತ್ತು ಹೋಗುತ್ತಿದೆಯೇನೋ ಎನಿಸುತ್ತದೆ.

ಲಕ್ಷಾಂತರ ಜೀವಿಗಳು ಈ ಭೂಮಿಯ ಮೇಲೆ ಜೀವಿಸಲು ಪ್ರಕೃತಿ ಅವಕಾಶ ಮಾಡಿಕೊಟ್ಟಿದೆ. ಆದರೆ ಮನುಷ್ಯನಷ್ಟು ನಿಕೃಷ್ಟ ಮತ್ತು ನೀಚತನದಿಂದ ಯಾವ ಜೀವಿಯೂ ಬದುಕುತ್ತಿಲ್ಲ. ಇದನ್ನು ಕಂಡೇ ಈಗ ಪ್ರಕೃತಿ ಈ ಪಾಠ ಕಲಿಸುತ್ತಿರಬಹುದು. ಪಾಠ ಕಲಿಯುತ್ತೇವೆಯೇ...?

ವಿ.ತಿಪ್ಪೇಸ್ವಾಮಿ, ಹಿರಿಯೂರು

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು