ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಾಚಕರ ವಾಣಿ: ಬರೀ ಚರ್ಚೆ, ಪರಿಹಾರ ಮರೀಚಿಕೆ

Last Updated 8 ಮೇ 2022, 22:30 IST
ಅಕ್ಷರ ಗಾತ್ರ

ಇನ್ನೂ ಬೇಸಿಗೆಯೇ ಮುಗಿದಿಲ್ಲ, ಆದರೆ ಬೆಂಗಳೂರಿನಲ್ಲಿ ಈಚೆಗೆ ಸುರಿದ, ಸುರಿಯುತ್ತಿರುವ ಮಳೆಗೆ ಮನೆಗಳೊಳಗೆ ನೀರು ನುಗ್ಗಿ ಅವಾಂತರ ಸೃಷ್ಟಿಯಾಗಿದೆ. ಒಂದೆರಡು ಮಳೆಗೇ ಹೀಗಾದರೆ ಮುಂದಿನ ದಿನಗಳಲ್ಲಿ ಅದೂ ಮಳೆಗಾಲದಲ್ಲಿ ಹೇಗೆ ಎಂಬ ಚಿಂತೆ ಕಾಡದಿರದು. ಈ ಹಿಂದೆ ರಾಜಕೀಯ ಬೆಂಬಲವಿಲ್ಲದ, ಸಾಮಾನ್ಯ ನಾಗರಿಕರ ಮನೆಗಳನ್ನು ರಾಜಕಾಲುವೆಯ ಅತಿಕ್ರಮಣವೆಂದು ಪರಿಗಣಿಸಿ ನಿರ್ದಾಕ್ಷಿಣ್ಯವಾಗಿ ಕೆಡವಿ ಹಾಕಲಾಗಿತ್ತು. ಕೆಲವು ಪ್ರಭಾವಿ ನಾಯಕರು, ಶ್ರೀಮಂತರು, ಚಿತ್ರನಟರ ಮನೆಗಳ ಗೊಡವೆಗೆ ಹೋಗಿರಲಿಲ್ಲ. ಎಂಥದ್ದೇ ಒತ್ತಡ ಬಂದರೂ ಅತಿಕ್ರಮಣವನ್ನು ತೆರವುಗೊಳಿಸಲಾಗುವುದು ಎಂದು ಸಚಿವರು ಹೇಳಿದ್ದರು. ಆದರೆ, ಆಗಿನ ರೋಷಾವೇಶದ ಮಾತು ಗಳು ಅಲ್ಲಿಗೇ ನಿಂತು ಹೋದವು. ಮತ್ತೆ ಯಥಾಪ್ರಕಾರ ಅದೇ ಮಳೆ, ಮನೆಗೆ ನೀರು ನುಗ್ಗುವಿಕೆ, ರಾಜಕಾಲುವೆ ಒತ್ತುವರಿ ಕುರಿತ ಚರ್ಚೆ ಮುಂದುವರಿದಿವೆ.

ಅತಿಕ್ರಮಣಕ್ಕೆ ಅವಕಾಶ ಮಾಡಿಕೊಟ್ಟ ಅಧಿಕಾರಿಗಳ ತಪ್ಪೋ ಮನೆ ಕಟ್ಟಿಕೊಂಡಿರುವ ನಿವಾಸಿಗಳ ತಪ್ಪೋ ಸಂಕಷ್ಟವಂತೂ ತಪ್ಪಿಲ್ಲ. ಪರಿಹಾರ ಮಾತ್ರ ಮರೀಚಿಕೆಯಾಗಿದೆ! ಭವಿಷ್ಯದ ಸಮಸ್ಯೆಗಳ ಅರಿವಿರುವವರು ಯಾರೂ ರಾಜಕಾಲುವೆ, ಕೆರೆ ಅಂಗಳ ಇತ್ಯಾದಿಗಳನ್ನು ಅತಿಕ್ರಮಿಸಿ ಮನೆಗಳನ್ನು ಕಟ್ಟಬಾರದು, ಸರ್ಕಾರವೂ ಅದಕ್ಕೆ ಅವಕಾಶ ಕೊಡಬಾರದು.

ಡಾ. ಚನ್ನು ಅ. ಹಿರೇಮಠ,ರಾಣೆಬೆನ್ನೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT