ಶುಕ್ರವಾರ, ಡಿಸೆಂಬರ್ 2, 2022
20 °C

ವಾಚಕರ ವಾಣಿ | ಮಾಲಿನ್ಯ ತಪ್ಪಿಸಿ, ಹೃದ್ರೋಗ ನಿಯಂತ್ರಿಸಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹೃದ್ರೋಗಿಗಳ ಸಂಖ್ಯೆ ಹೆಚ್ಚುತ್ತಿರುವುದರ ಬಗ್ಗೆ ವಿಶ್ವ ಹೃದಯ ದಿನದ (ಸೆ. 29) ಸಂದರ್ಭದಲ್ಲಿ ವೈದ್ಯರು ತಿಳಿಸಿರುವುದು ಮಾಧ್ಯಮಗಳಲ್ಲಿ ವರದಿಯಾಗಿದೆ. ಹೃದಯ ತಜ್ಞರು ಹೃದಯಾಘಾತಕ್ಕೆ ನೀಡುವ ಕಾರಣಗಳಲ್ಲಿ ಅನಾರೋಗ್ಯಕರ ಆಹಾರ ಪದ್ಧತಿ, ಜೀವನಶೈಲಿ, ಮದ್ಯಪಾನ, ಧೂಮಪಾನ, ಮಾನಸಿಕ ಒತ್ತಡ ಮತ್ತು ಪರಿಸರ ಮಾಲಿನ್ಯ ಮುಖ್ಯವಾದವು. ಇವುಗಳಲ್ಲಿ ಪರಿಸರ ಮಾಲಿನ್ಯ ಹೊರತುಪಡಿಸಿದರೆ, ಉಳಿದ ಎಲ್ಲ ಕಾರಣಗಳಿಗೆ ಒಬ್ಬ ವ್ಯಕ್ತಿಯ ವೈಯಕ್ತಿಕ ಜೀವನಶೈಲಿ ಕಾರಣವಾಗಬಹುದು. ಆದರೆ ಪರಿಸರ ಮಾಲಿನ್ಯಕ್ಕೆ ನಮ್ಮ ಆಡಳಿತ ಕಾರಣವಾಗುತ್ತದೆ. ಸ್ವಚ್ಛ, ಸುಂದರ, ಪ್ರಶಾಂತ ವಾತಾವರಣಕ್ಕೆ ಪೂರಕವಾದ ಕ್ರಮಗಳನ್ನು ಕೈಗೊಳ್ಳಬೇಕಾದುದು ಆಡಳಿತ ನಡೆಸುವವರ ಹೊಣೆ. ಯಾರೋ ಮಾಡುವ ತಪ್ಪಿಗೆ ಬೇರೆಯವರ ಜೀವ ಬಲಿಯಾಗುವುದನ್ನು ತಪ್ಪಿಸಬೇಕು.

⇒ಸುರೇಶ ಅರಳಿಮರ, ಬಾದಾಮಿ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು