ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಾಚಕರ ವಾಣಿ: ನೀರಿನ ಬಾಟಲಿನಲ್ಲಿ ತಾರತಮ್ಯವೇಕೆ?

Last Updated 3 ಮೇ 2022, 19:30 IST
ಅಕ್ಷರ ಗಾತ್ರ

ತಿಂಗಳ ಹಿಂದೆ ಕಾಶಿ ವಿಮಾನ ನಿಲ್ದಾಣದಲ್ಲಿ ಊರಿಗೆ ಬರುವ ವಿಮಾನಕ್ಕೆ ಕಾಯುತ್ತಿದ್ದೆ. ಬಿಸಿಲ ಝಳ ವಿಪರೀತ ಇದ್ದುದರಿಂದ ಕುಡಿಯಲು ಎರಡು ಬಾಟಲು ನೀರು ಹಿಡಿದುಕೊಂಡಿದ್ದೆ. ನನ್ನನ್ನು ವೈಟಿಂಗ್ ರೂಮೊಳಗೆ ಬಿಡುವಾಗ, ಕೈಯಲ್ಲಿ ಇದ್ದ ನೀರಿನ ಬಾಟಲಿಯನ್ನು ಒಳಗೆ ಒಯ್ಯವಂತಿಲ್ಲ ಎಂದು ತಪಾಸಣಾ ಅಧಿಕಾರಿಗಳು ಹೇಳಿದರು. ಆಗ ತಾನೇ ಖರೀದಿಸಿದ ನೀರಿನ ಬಾಟಲಿಗಳನ್ನು ಬಿಸಾಡಲು ಮನ ಒಪ್ಪದೆ ಇದ್ದರೂ ಗತ್ಯಂತರವಿಲ್ಲದೆ ಹಾಗೇ ಮಾಡಿದೆ. ಆದರೆ ವೈಟಿಂಗ್ ರೂಮೊಳಗೆ ವಿಮಾನ ನಿಲ್ದಾಣದವರು ಮಾರಾಟಕ್ಕೆ ನೀರನ್ನು ಇಟ್ಟಿದ್ದರು. ಬೆಲೆ ಮಾತ್ರ ದುಪ್ಪಟ್ಟು. ಅರ್ಧ ಲೀಟರ್ ನೀರಿಗೆ ₹ 40 ಕೊಡಬೇಕಿತ್ತು. ಅವರ ನೀರನ್ನು ಖರೀದಿಸಬಹುದಾದರೆ ನಮ್ಮ ನೀರನ್ನು ನಾವು ವಿಮಾನ ನಿಲ್ದಾಣದೊಳಗೆ ಯಾಕೆ ಒಯ್ಯಬಾರದು ಎಂಬ ಪ್ರಶ್ನೆ ಆಗ ನನ್ನಲ್ಲಿ ಮೂಡಿತು. ನಮ್ಮ ನೀರನ್ನು ಅಲ್ಲೇ ಬಿಟ್ಟು ಹೊಸ ಬಾಟಲು ಖರೀದಿಸಿದರೆ ಅಷ್ಟರಮಟ್ಟಿಗೆ ಪ್ಲಾಸ್ಟಿಕ್ ಬಳಕೆ ಹೆಚ್ಚಾದಂತೆ ಆಗಲಿಲ್ಲವೇ? ಇದು ಪರಿಸರಕ್ಕೆ ಹಾನಿ ಮಾಡಿದಂತೆ ಅಲ್ಲವೇ?

ಇನ್ನಾದರೂ ವಿಮಾನ ನಿಲ್ದಾಣದೊಳಗೆ ನಾವು ಒಯ್ಯುವ ನೀರಿಗೆ ಅನುಮತಿ ಕೊಟ್ಟು, ಪ್ಲಾಸ್ಟಿಕ್ ಬಳಕೆ ಕಡಿಮೆ ಮಾಡುವಲ್ಲಿ ನಿಲ್ದಾಣದ ಅಧಿಕಾರಿಗಳು ಕೈಜೋಡಿಸಬೇಕು.

- ಸಹನಾ ಕಾಂತಬೈಲು,ಮಡಿಕೇರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT