ಸೋಮವಾರ, ಆಗಸ್ಟ್ 15, 2022
25 °C

ಜೀವ‌ರಕ್ಷಕ‌ ಹೆಲ್ಮೆಟ್: ಮಾಡೋಣ ಪ್ರತಿಜ್ಞೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನಟ ಸಂಚಾರಿ ವಿಜಯ್ ಅವರು ರಸ್ತೆ ಅಪಘಾತದಲ್ಲಿ ತಲೆಗೆ ತೀವ್ರ ಪೆಟ್ಟು ಬಿದ್ದು ಪ್ರಾಣ ಕಳೆದುಕೊಂಡಿರುವುದಕ್ಕೆ ಹೆಲ್ಮೆಟ್ ಧರಿಸದೇ ಇದ್ದ ಅವರ ನಿರ್ಲಕ್ಷ್ಯವೇ ಕಾರಣ ಎಂದರೆ ತಪ್ಪಾಗಲಾರದು. ದ್ವಿಚಕ್ರ ವಾಹನ ಚಾಲಕ ಹಾಗೂ ಹಿಂಬದಿ ಸವಾರ ಇಬ್ಬರಿಗೂ ಹೆಲ್ಮೆಟ್ ಕಡ್ಡಾಯ ಎಂಬ ನಿಯಮ ರೂಪಿಸಲಾಗಿದೆ. ಹೀಗಿದ್ದರೂ ಕೆಲವರು ಹೆಲ್ಮೆಟ್ ಧರಿಸದೇ ಅಪಾಯವನ್ನು ಮೈಮೇಲೆ ಎಳೆದುಕೊಳ್ಳುತ್ತಿದ್ದಾರೆ. ಇಂಥ ಸಣ್ಣದೊಂದು ನಿರ್ಲಕ್ಷ್ಯದಿಂದಲೇ ಇಂದು ಅಪ್ಪಟ ಪ್ರತಿಭೆಯೊಂದು ಚಿಗುರುವ ಹಂತದಲ್ಲೇ ಕಮರುವಂತಾಯಿತು.

ಪೊಲೀಸರ ಭಯಕ್ಕೆ ನಾವಿಂದು ಕೆಲ ಸಂಚಾರ ನಿಯಮಗಳನ್ನು ಪಾಲಿಸುತ್ತಿದ್ದೇವೆ. ಸಂಚಾರ ಪೊಲೀಸರು ವಾಹನ ಅಡ್ಡಗಟ್ಟಿ ದಂಡ ಹಾಕುತ್ತಾರೆಂದು ಹಿಡಿಶಾಪ ಹಾಕುತ್ತೇವೆ. ಆದರೆ ದಂಡದ ಮಹತ್ವದ ಅರಿವು
ನಮಗಾಗುತ್ತಿಲ್ಲ. ಸಂಚಾರ ನಿಯಮಗಳ ಬಗ್ಗೆ ಇನ್ನಾದರೂ ನಾವು ಜಾಗೃತರಾಗಬೇಕು. ಹೆಲ್ಮೆಟ್ ಧರಿಸದೇ ಬೈಕ್ ಹತ್ತುವುದಿಲ್ಲವೆಂದು ಪ್ರತಿಜ್ಞೆ ಮಾಡಬೇಕು.

- ಪುಷ್ಪಲತಾ ಎಂ., ಬಿಳಿಗೆರೆಹುಂಡಿ, ಮೈಸೂರು

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.