ಸೋಮವಾರ, ಜೂಲೈ 6, 2020
27 °C

ದ್ವಿಭಾಷಾ ಸೂತ್ರವೇ ಪರಿಹಾರ

ಧರ್ಮರಾಜ ಎಂ. ಕಲ್ಯಾಣಿ. ಬೆಂಗಳೂರು Updated:

ಅಕ್ಷರ ಗಾತ್ರ : | |

50 ವರ್ಷಗಳ ಹಿಂದೆ ಅಂದಿನ ಪ್ರಧಾನಿ ಇಂದಿರಾ ಗಾಂಧಿ ಅವರು ‘ತ್ರಿಭಾಷಾ ಸೂತ್ರವೇ ಭಾಷಾ ಸಮಸ್ಯೆಗೆ  ಪರಿಹಾರ. ಇದಕ್ಕೂ ಉತ್ತಮ ಪರಿಹಾರವನ್ನು ಯಾರೂ ಸೂಚಿಸಿಲ್ಲ’ ಎಂದು ತಿರುವನಂತಪುರದಲ್ಲಿ ಹೇಳಿದ್ದಾರೆ (ಪ್ರ.ವಾ., 50 ವರ್ಷಗಳ ಹಿಂದೆ, ಮೇ 19). ನನ್ನ ಪ್ರಕಾರ, ವಿವಿಧ ಭಾಷೆಗಳುಳ್ಳ ಭಾರತಕ್ಕೆ ದ್ವಿಭಾಷಾ  ಸೂತ್ರವೇ ನ್ಯಾಯಯುತವಾದ ಪರಿಹಾರ. 

ಆಯಾ ಪ್ರಾಂತದಲ್ಲಿ ಹೆಚ್ಚು ಜನರು ಮಾತನಾಡುವ ಭಾಷೆಯ ಜೊತೆಗೆ ಇಂಗ್ಲಿಷ್‌ ಇರಬೇಕು. ಉದಾಹರಣೆಗೆ:  ಕರ್ನಾಟಕದಲ್ಲಿ ಕನ್ನಡ, ರಾಜ್ಯಗಳ ನಡುವೆ ಸಂಪರ್ಕಕ್ಕೆ, ವಾಣಿಜ್ಯ ವ್ಯವಹಾರಕ್ಕೆ, ವಿಜ್ಞಾನ ವ್ಯಾಸಂಗಕ್ಕೆ  ಇಂಗ್ಲಿಷ್. ಕೆಲವರು ಒಪ್ಪಬಹುದು. ಇನ್ನು ಕೆಲವರು ಒಪ್ಪದೇ ಇರಬಹುದು. ಅದರಲ್ಲೂ ಉತ್ತರ ಭಾರತದ ಕೆಲವರಿಗೆ ಇದು ರುಚಿಸದಿರಬಹುದು. ಅಂತಿಮವಾಗಿ ನ್ಯಾಯಯುತವಾಗಿ ಉಳಿಯಬೇಕಾದದ್ದು, ಉಳಿಯುವುದು  ದ್ವಿಭಾಷಾ ಸೂತ್ರವೇ. ಹಿಂದಿ ಹೇರಿಕೆಯನ್ನು ಒಪ್ಪಲಾಗದು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.