ಹೊಳಲ್ಕೆರೆ ತಾಲ್ಲೂಕಿನ ಶಿವಪುರ ಗ್ರಾಮದಲ್ಲಿ ಮದ್ಯ ಮಾರಾಟ ಮಾಡುವವರು ಹಾಗೂ ಕೊಳ್ಳುವವರಿಗೆ ದಂಡ ವಿಧಿಸಿ, ಈ ಬಗ್ಗೆ ಸುಳಿವು ಕೊಟ್ಟವರಿಗೆ ಬಹುಮಾನ ನೀಡಲಾಗುತ್ತಿರುವ ವರದಿ (ಪ್ರ.ವಾ., ಡಿ. 18) ನಿಜಕ್ಕೂ ಆಶ್ಚರ್ಯ ತಂದಿದೆ. ಮದ್ಯಪಾನಮುಕ್ತ ಗ್ರಾಮ ಆಗಬೇಕು ಎಂಬ ಸಿರಿಗೆರೆಯ ಶಿವಕುಮಾರ ಶಿವಾಚಾರ್ಯ ಸ್ವಾಮೀಜಿ ಅವರ ಮಾತನ್ನು ಗ್ರಾಮಸ್ಥರು ಕಾರ್ಯರೂಪಕ್ಕೆ ತಂದು ಸೈ ಎನ್ನಿಸಿಕೊಂಡಿರುವುದು, ಈ ದಿನಮಾನಗಳಲ್ಲಿ ಅಪರೂಪದಲ್ಲಿ ಅಪರೂಪದ ವಿದ್ಯಮಾನ. ಇಂತಹ ಬದಲಾವಣೆ ಆಂದೋಲನ ಈ ರೀತಿ ಗಟ್ಟಿಯಾಗಿ, ಸಣ್ಣದಾಗಿ ಆರಂಭಗೊಂಡು ವ್ಯಾಪಕತೆ ಪಡೆಯಬೇಕು.

ಎರಡೂವರೆ ಮೂರು ದಶಕಗಳ ಹಿಂದೆ ಚಿತ್ರದುರ್ಗ ಭಾಗದಲ್ಲಿ ಮದ್ಯಪಾನ ವಿರೋಧಿ ಆಂದೋಲನ ನಡೆದಿತ್ತು. ಆ ಕಾರ್ಯದಲ್ಲಿ ಪಾಲ್ಗೊಳ್ಳಲು ಮತ್ತು ಬೆಂಬಲಿಸಲು ಚಿತ್ರದುರ್ಗ ಬೃಹನ್ಮಠದ ಹಿಂದಿನ ಜಗದ್ಗುರುಗಳಿಗೆ ಆಮಂತ್ರಣ ಹೋದಾಗ, ಮದ್ಯಪಾನ ಮಾಡುವ ಭಕ್ತರಿಂದ ಕಾಣಿಕೆ ಸ್ವೀಕರಿಸದೇ ಇದ್ದರೆ ಆಂದೋಲನ ಅರ್ಧ ಯಶಸ್ವಿಯಾದಂತೆ ಎಂದು ಅವರು ಆಯೋಜಕರಿಗೆ ಸಲಹೆ ನೀಡಿದ್ದರು. ಅಂದಿನ ಶ್ರೀಗಳ ಈ ಮಾರ್ಮಿಕ ಸಲಹೆ, ಬರೀ ಮಾತಿನಿಂದ ಏನೂ ಆಗದು, ಅದು ಕೃತಿಗೆ ಬರಬೇಕು ಎಂಬ ಇಂದಿನ ಶ್ರೀಗಳ ಆಶಯದಲ್ಲಿ ಸಮಾಜವನ್ನು ತಿದ್ದುವ ಹೆಬ್ಬಯಕೆ ಇದೆ. ಇದು ತೀವ್ರ ಸ್ವರೂಪ ಪಡೆಯಬೇಕಷ್ಟೇ.

-ರುದ್ರಮೂರ್ತಿ ಎಂ.ಜೆ., ಚಿತ್ರದುರ್ಗ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.