ಭಾನುವಾರ, 12 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿನಿಕತನ ಯಾಕೆ ಬೇಕು?

Last Updated 25 ಫೆಬ್ರುವರಿ 2019, 20:17 IST
ಅಕ್ಷರ ಗಾತ್ರ

ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿಯ ಮೊದಲ ಕಂತಿನ ₹2000ವನ್ನು ಆಯ್ದ ರೈತರ ಖಾತೆಗಳಿಗೆ ವರ್ಗಾವಣೆ ಮಾಡಿದೆ ಕೇಂದ್ರ ಸರ್ಕಾರ. ಮಾಜಿ ಹಣಕಾಸು ಸಚಿವ ಪಿ.ಚಿದಂಬರಂ ಪ್ರಕಾರ ಇದು ‘ವೋಟಿಗಾಗಿ ಹಣ’ ಯೋಜನೆ. ‘ಅಧಿಕೃತವಾಗಿ ಲಂಚ ನೀಡುವ ಹುನ್ನಾರ’ ಎಂದು ಸಹ ನರೇಂದ್ರ ಮೋದಿ ನೇತೃತ್ವದ ಸರ್ಕಾರದ ಈ ಕ್ರಮವನ್ನು ಚಿದಂಬರಂ ಲೇವಡಿ ಮಾಡಿದ್ದಾರೆ (ಪ್ರ.ವಾ., ಫೆ. 25).

ಈ ಯೋಜನೆ ಪ್ರಕಟವಾದೊಡನೆ ‘ಇದು ಬಡ ರೈತನಿಗೆ ದಿನಕ್ಕೆ ಕೇವಲ ₹ 17 ಹಂಚುವ ಔದಾರ್ಯ’ ಎಂದು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಗೇಲಿ ಮಾಡಿದ್ದರು. ಆದರೆ ಇದುವರೆಗೂ ಏನೂ ಇರದಿದ್ದ ರೈತನಿಗೆ ಈಗ ಇಷ್ಟಾದರೂ ಸಿಕ್ಕಿತಲ್ಲ ಎನ್ನುವುದನ್ನು ಕಾಂಗ್ರೆಸ್ಸಿಗರು ಹೇಗೆ ಸಹಿಸಿಯಾರು? ರಾಜಕೀಯವೇ ಹಾಗೆ. ಮತ ಗಳಿಕೆಗೆ ಚ್ಯುತಿ ಬಂತಲ್ಲಾ ಎನ್ನುವ ವ್ಯಸನ ಕಾಂಗ್ರೆಸ್ಸಿಗಾದರೆ, ತನಗೆ ಇನ್ನಷ್ಟು ಮತ ದಕ್ಕೀತೇ ಎನ್ನುವ ಕಾತರ ಬಿಜೆಪಿಗೆ. ಪಕ್ಷಗಳು ಮಾಡುವುದೇ ಮತಗಳಿಗಾಗಿ, ಅಧಿಕಾರದ ಸವಿ ಸವಿಯಲಿಕ್ಕಾಗಿ. ಈ ಪೈಪೋಟಿಯಲ್ಲಿ ಬಡ ರೈತನಿಗೆ ಒಂದಷ್ಟು ದಕ್ಕಿದರೆ ದಕ್ಕಲಿ. ಅಲ್ಲದೆ, ಪ್ರತಿವರ್ಷ ಅರ್ಹ ರೈತನ ಖಾತೆಗೆ ಜಮಾ ಆಗುವ ರೊಕ್ಕ ಇದು. ಬರುವ ವರ್ಷಗಳಲ್ಲಿ ಈ ಮೊತ್ತ ಹೆಚ್ಚಾಗಬಹುದು. ಯಾಕೆ ಸಿನಿಕರಾಗಬೇಕು?

– ಬೆಂಗಳೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT