ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಾಚಕರ ವಾಣಿ: ‘ಮೈಕಾಸುರ’ ರಥ ಏರದಿರಲಿ

Last Updated 29 ಆಗಸ್ಟ್ 2022, 19:30 IST
ಅಕ್ಷರ ಗಾತ್ರ

ತಳ್ಳುಗಾಡಿಗಳಲ್ಲಿ ಸೊಪ್ಪು, ತರಕಾರಿ, ಹೂವು, ಹಣ್ಣಿನಂತಹ ಉಪಯುಕ್ತ ವಸ್ತುಗಳನ್ನು ಮನೆ ಬಾಗಿಲಿಗೇ ತರುವ ವ್ಯಾಪಾರಿಗಳಿಗೆ ಆಭಾರಿಗಳಾಗಿರೋಣ. ಆದರೆ ಇತ್ತೀಚೆಗೆ ಒಂದು ‘ಟ್ರೆಂಡ್’ ಹೆಚ್ಚುತ್ತಿದೆ. ಸರಾಗಕ್ಕೋ ಅಥವಾ ಹೆಚ್ಚಿನವರಿಗೆ ಕೂಗು ಮುಟ್ಟಲೆಂದೋ ಈ ವ್ಯಾಪಾರಿಗಳು ಧ್ವನಿವರ್ಧಕ ಬಳಸುತ್ತಾರೆ. ಮೊದಲೇ ಶಬ್ದಮಾಲಿನ್ಯ ತಾಂಡವವಾಡುತ್ತಿದೆ. ವಿಶೇಷವಾಗಿ ಚಿಣ್ಣರಿಗೆ, ವೃದ್ಧರಿಗೆ, ವಿವಿಧ ಕಾಯಿಲೆಗಳಿಂದ ಗುಣಮುಖರಾಗುತ್ತಿರುವವರಿಗೆ ಕಿರಿಕಿರಿ ಉಂಟುಮಾಡುವ ಈ ‘ಮೈಕಾಸುರ’ ರಥವೇರುವುದೇಕೆ? ತಳ್ಳುಗಾಡಿ ವ್ಯಾಪಾರಿಗಳು ಧ್ವನಿವರ್ಧಕ ಬಳಸದಂತೆ ಸಂಬಂಧಿಸಿದ ಇಲಾಖೆ ಸೂಚನೆ ನೀಡಬೇಕಿದೆ.

-ಬಿಂಡಿಗನವಿಲೆ ಭಗವಾನ್‌, ಬೆಂಗಳೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT