ಶನಿವಾರ, ಜುಲೈ 24, 2021
22 °C

ಆರೋಗ್ಯ ಸಹಾಯಕರನ್ನೂ ಕಾಯಂಗೊಳಿಸಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಗುತ್ತಿಗೆ ವೈದ್ಯರ ಸೇವೆಯನ್ನು ಸರ್ಕಾರ ಕಾಯಂ ಮಾಡಲು ಮುಂದಾಗಿರುವುದು ಸ್ವಾಗತಾರ್ಹ. ಅದೇ ರೀತಿ ಆರೋಗ್ಯ ಇಲಾಖೆಯಲ್ಲಿ ಲ್ಯಾಬ್ ಟೆಕ್ನೀಷಿಯನ್‌ಗಳು, ಶುಶ್ರೂಷಕಿಯರು ಸೇರಿದಂತೆ ವಿವಿಧ ವಿಭಾಗಗಳಲ್ಲಿ ಹಲವಾರು ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವ ಸಾವಿರಾರು ಗುತ್ತಿಗೆ ನೌಕರರಿದ್ದಾರೆ. ಇವರಿಂದ ಕೊರೊನಾ ತಪಾಸಣೆ ಮಾಡಿಸಲಾಗುತ್ತಿದೆ. ಪ್ರಾಥಮಿಕ, ಸಮುದಾಯ, ನಗರ ಜಿಲ್ಲಾ ಆಸ್ಪತ್ರೆಗಳಲ್ಲಿ ಕಾಯಂ ನೌಕರರಿಲ್ಲ, ಎಲ್ಲೆಡೆಯೂ ಗುತ್ತಿಗೆ ನೌಕರರೇ ಇದ್ದಾರೆ‌. ಸರ್ಕಾರ ಇವರ ಬಗ್ಗೆಯೂ ಕಾಳಜಿ ತೋರಿ ಸೇವೆಯನ್ನು ಕಾಯಂಗೊಳಿಸಬೇಕು.

- ವೀರೇಶ ಬಿ., ಹಾವೇರಿ, ಶರಣಪ್ಪ ಕೆ., ಗದಗ, ಬಸವರಾಜ‌ ಡಿ., ಕುಂದಗೋಳ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.