ಶನಿವಾರ, ಜನವರಿ 25, 2020
28 °C

ಮಸೀದಿ ಸಂದರ್ಶನಕ್ಕೆ ಅವಕಾಶ: ಸ್ವಾಗತಾರ್ಹ ನಡೆ

ದಿನಮಣಿ ಬಿ.ಎಸ್. ಮೈಸೂರು Updated:

ಅಕ್ಷರ ಗಾತ್ರ : | |

ಸಾಮಾಜಿಕ ಸೌಹಾರ್ದ ಬೆಸೆಯುವ ನಿಟ್ಟಿನಲ್ಲಿ ಕೊಪ್ಪಳ ಜಿಲ್ಲೆಯಲ್ಲಿ ಇದೇ 8ರಂದು ಸರ್ವ ಧರ್ಮೀಯರಿಗೂ ಮಸೀದಿ ಸಂದರ್ಶನಕ್ಕೆ ಅವಕಾಶ ಮಾಡಿಕೊಡಲು ಮುಂದಾಗಿರುವ ಜಮಾತ್- ಎ - ಇಸ್ಲಾಮಿಯಾ ಹಿಂದ್ ಸಂಘಟನೆಯ ನಡೆ ಸ್ವಾಗತಾರ್ಹ. ದೇವರು ವರ ಕೊಟ್ಟರೂ ಪೂಜಾರಿ ಕೊಡ ಎಂಬಂತೆ, ಎಷ್ಟೋ ಹಿಂದೂ ದೇವಾಲಯಗಳಲ್ಲಿ ಇನ್ನೂ ತಮ್ಮದೇ ಧರ್ಮದ ಕೆಳವರ್ಗದ ಜನರಿಗೆ ಹಾಗೂ ಮಹಿಳೆಯರಿಗೆ ದೇವಸ್ಥಾನ ಪ್ರವೇಶ ಕನಸಿನ ಮಾತಾಗಿದೆ. ಇಸ್ಲಾಂ ಧರ್ಮೀಯರು ಮಸೀದಿ ಸಂದರ್ಶನಕ್ಕೆ ಮಹಿಳೆಯರಿಗೂ ಪ್ರತ್ಯೇಕ ಆಸನದ ವ್ಯವಸ್ಥೆ ಮಾಡಿರುವುದು ಶ್ಲಾಘನೀಯ.

ಸೌಹಾರ್ದ ಸಮಾಜವನ್ನು ಕಟ್ಟಲು ಪರಸ್ಪರರು ಬೆರೆತು, ಅರಿಯಬೇಕಾದ ಈ ಅನಿವಾರ್ಯ ಸನ್ನಿವೇಶದಲ್ಲಿ, ಬಹಿರಂಗ ಸಭೆಯ ಅಧ್ಯಕ್ಷತೆಯನ್ನು ಸ್ವಾಮೀಜಿಯೊಬ್ಬರು ವಹಿಸುತ್ತಿರುವುದು ಸ್ತುತ್ಯರ್ಹ. ಬೆಳಕಿನ ಕಿರಣಗಳು ಯಾವ ಕಡೆಯಿಂದ ಬಂದರೂ ಸ್ವಾಗತಾರ್ಹ ಎಂಬಂತೆ ಉತ್ತಮ ಆಲೋಚನೆಗಳು, ಬದಲಾವಣೆಗಳು ಯಾರಿಂದಲೇ ಉಂಟಾದರೂ ಸ್ವಾಗತಿಸಬೇಕಲ್ಲವೇ?

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು