ಶನಿವಾರ, ಅಕ್ಟೋಬರ್ 24, 2020
24 °C

ಜಂಬೂ ಸವಾರಿ: ಸೀಮಿತ ಆಚರಣೆ ಇರಲಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕೋವಿಡ್‌ನಿಂದ ಉಂಟಾಗಿರುವ ಸೂಕ್ಷ್ಮ ಸ್ಥಿತಿಯಿಂದಾಗಿ ಮೈಸೂರಿನಲ್ಲಿ ಜಂಬೂಸವಾರಿಯನ್ನು ಸಾರ್ವಜನಿಕವಾಗಿ ಆಚರಿಸುವುದು ಸರಿಯಲ್ಲ.  ಭೌತಿಕ ಅಂತರ ಕಾಪಾಡಿಕೊಳ್ಳದಿರುವುದು, ಮಾಸ್ಕ್ ಧರಿಸದೇ ಇರುವುದು ಈಗೀಗ ಸಾಮಾನ್ಯವಾಗಿ ಬಿಟ್ಟಿದೆ. ಕೊರೊನಾ ಸೋಂಕಿನ ಬಗ್ಗೆ ಮೊದಲಿದ್ದ ಆತಂಕ ಈಗ ಇಲ್ಲವಾಗಿದೆ. ಜಂಬೂಸವಾರಿ ನೋಡಲು ಮೈಸೂರಿನಲ್ಲಿ ಜನ ದಟ್ಟೈಸಿದರೆ ಸೋಂಕು ಹರಡುವ ಸಾಧ್ಯತೆ ಇಲ್ಲದಿಲ್ಲ. ಆದ್ದರಿಂದ ಜಂಬೂ ಸವಾರಿಗಿಂತ ಸಾರ್ವಜನಿಕರ ಆರೋಗ್ಯಕ್ಕೆ ಮಹತ್ವ ನೀಡಬೇಕಾಗಿದೆ. ಬೇಕಾದರೆ
ಸೀಮಿತವಾಗಿ ಅರಮನೆ ಆವರಣದಲ್ಲಿ ಸರಳವಾಗಿ ಆಚರಿಸಿಕೊಂಡು ಪರಂಪರೆಯನ್ನು ಮುಂದುವರಿಸುವುದು ಒಳ್ಳೆಯದು.

–ಸಿ.ಸಿದ್ದರಾಜು ಆಲಕೆರೆ, ಮಂಡ್ಯ

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು