ಶುಕ್ರವಾರ, ಅಕ್ಟೋಬರ್ 18, 2019
20 °C

ಭಾರತದಲ್ಲಿ ಎಲ್ಲವೂ ಕ್ಷೇಮ| ಹೊರಗಿನವರ ಎದುರು ಪ್ರಧಾನಿ ಮಾತು ಸರಿ

Published:
Updated:

ಅಮೆರಿಕದಲ್ಲಿ ನಡೆದ ‘ಹೌಡಿ ಮೋದಿ’ ಕಾರ್ಯಕ್ರಮದಲ್ಲಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ ‘ಭಾರತದಲ್ಲಿ ಎಲ್ಲವೂ ಕ್ಷೇಮ’ ಎಂಬರ್ಥದಲ್ಲಿ ಮಾತನಾಡಿರುವುದನ್ನು ವಿಶ್ಲೇಷಿಸಿರುವ ರಘುನಾಥ್ ಚ.ಹ. ಅವರ ಲೇಖನ (ಪ್ರ.ವಾ., ಸೆ. 30) ವಸ್ತುಸ್ಥಿತಿಯ ಉತ್ತಮ ಚಿತ್ರಣ. ಕೆಟ್ಟ ಸಾಮಾಜಿಕ ಪದ್ಧತಿಗಳು ಇನ್ನೂ ಜೀವಂತವಾಗಿರುವ ಇಂದಿನ ಸ್ಥಿತಿಯಲ್ಲಿ, ಎಲ್ಲವೂ ಕ್ಷೇಮ ಎಂದರೆ ಹೇಗೆ? ಅದೂ ದೇಶದ ಮುಖಂಡರಾಗಿ ಹೀಗೆ ಹೇಳಬಹುದೇ ಎಂಬ ಪ್ರಶ್ನೆ ಏಳುತ್ತದೆ. ಆದರೆ ಮನೆಯ ಯಜಮಾನ ಮನೆಯ ಹುಳುಕನ್ನು ಹೊರಗಿನವರ ಮುಂದೆ ಹೇಳುವುದೂ ತಪ್ಪಲ್ಲವೇ? ಒಬ್ಬ ಯಜಮಾನ ಅಥವಾ ಯಜಮಾನಿ ಮನೆಯಲ್ಲಿ ಎಷ್ಟೇ ತೊಂದರೆಗಳಿದ್ದರೂ, ಮನೆಯ ಸದಸ್ಯರು ತಪ್ಪು ದಾರಿ ಹಿಡಿದಿದ್ದರೂ, ಹೊರಗಿನವರ ಮುಂದೆ ಅದನ್ನೆಲ್ಲ ಹೇಳದೆ ಒಳ್ಳೆಯದನ್ನೇ ಹೇಳಿಕೊಳ್ಳುತ್ತಾರೆ.

ಇದನ್ನೂ ಓದಿ: ಎಲ್ಲವೂ ಕ್ಷೇಮ, ಎಲ್ಲರೂ ಆರಾಮ!

ಅಲ್ಪಸಂಖ್ಯಾತರ ಮೇಲೆ ಹಲ್ಲೆಗಳಾದಾಗ, ದಲಿತರ ಮೇಲೆ ದೌರ್ಜನ್ಯಗಳಾದಾಗ ಇದೇ ಪ್ರಧಾನಿ ‘ಯಾವುದೇ ಕಾರಣಕ್ಕೂ ಇವೆಲ್ಲವನ್ನೂ ಸಹಿಸುವುದಿಲ್ಲ. ತಪ್ಪಿತಸ್ಥರಿಗೆ ಶಿಕ್ಷೆ ನೀಡಿಯೇ ಸಿದ್ಧ’ ಎಂದು ಗುಡುಗಲಿಲ್ಲವೇ? ನಮ್ಮ ದೇಶದ ಹಿಂದಿನ‌ ಯಾವುದೇ ಪ್ರಧಾನಿಗಿಂತ ಈಗಿನ ಪ್ರಧಾನಿ ಹೆಚ್ಚು ಸತ್ವಪರೀಕ್ಷೆಗೆ ಒಳಗಾಗುತ್ತಿದ್ದಾರೆ. ಇದು ಪ್ರಜಾಪ್ರಭುತ್ವ ರಾಷ್ಟ್ರಕ್ಕೆ ಒಳ್ಳೆಯದೇ. ಇದರಿಂದ ದೇಶದ ಅನಿಷ್ಟಗಳು ನಿರ್ನಾಮವಾಗಬಹುದು.

–ಸ್ಮಿತಾ ಮೈಸೂರ, ಹುಬ್ಬಳ್ಳಿ

ಇನ್ನಷ್ಟು ಓದು

‘ಹೌಡಿ- ಮೋದಿ’ ರವಾನಿಸಿದ ಸಂದೇಶ?

ಎಲ್ಲಾ ಚೆನ್ನಾಗಿದೆ!

 

Post Comments (+)