ಬುಧವಾರ, ಏಪ್ರಿಲ್ 1, 2020
19 °C

ಮಠ, ಮಂದಿರಗಳಿಗೆ ಅನುದಾನ ಬೇಕೇ?

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಠ, ದೇಗುಲಗಳಿಗೆ ಕೆಲ ವರ್ಷಗಳ ಹಿಂದೆ ಶುರುವಿಟ್ಟ ಅನುದಾನ ನೀಡುವ ಪದ್ಧತಿ, ರಾಜ್ಯದ ಈಗಿನ ವಿಷಮ ಪರಿಸ್ಥಿತಿಯಲ್ಲಿಯೂ ಮುಂದು ವರಿಯುತ್ತಿರುವುದು (ಪ್ರ.ವಾ., ಮಾರ್ಚ್‌ 18) ಮೆಚ್ಚುಗೆಯ ನಡೆಯಲ್ಲ. ಯಾವ ಮಠ, ಮಂದಿರವೂ ಇಂದು ಬಡವಾಗಿಲ್ಲ. ಸಮುದಾಯ, ಸಾರ್ವಜನಿಕರ ದೇಣಿಗೆಗಳಿಂದ, ಭಕ್ತರ ಕೊಡುಗೆಗಳಿಂದ ಅವು ಸುಸ್ಥಿತಿ ಯಲ್ಲಿವೆ. ಸಮಾಜಸೇವೆಯಲ್ಲಿ ತೊಡಗಿಸಿಕೊಂಡ ಮಠ, ಮಂದಿರಗಳು ಎಂದೂ ಹಣದ ಅಡಚಣೆಯನ್ನು ಎದುರಿಸಿದಂತಹ ಉದಾಹರಣೆ ಇಲ್ಲ. ದೇಗುಲಗಳ ಪುನರುಜ್ಜೀವನ ಕಾರ್ಯವು ಹಣದ ತೊಂದರೆಯಿಲ್ಲದೆ ಎಲ್ಲೆಡೆ ಸಾಂಗವಾಗಿ ಸಾಗುತ್ತಿದೆ.‌

ಈಗ ರಾಜ್ಯದ ಉದ್ದಗಲಕ್ಕೂ ಹಾಸಿ ಹೊದ್ದುಕೊಳ್ಳುವಷ್ಟು ಸಮಸ್ಯೆಗಳಿವೆ. ಹೀಗಿರುವಾಗ, ತೆರಿಗೆಯ ಹಣವನ್ನು ಅನುತ್ಪಾದಕ ಕ್ಷೇತ್ರಗಳಿಗೆ ಹರಿಸುವುದು ವಿವೇಚನೆಯ ನಿರ್ಧಾರವಾಗುವುದಿಲ್ಲ. ಯಾವುದೇ ಅನುದಾನವು ಸಾರ್ವಜನಿಕ ಬದುಕನ್ನು ಹಸನಾಗಿಸುವ ದೃಷ್ಟಿಯನ್ನು ಹೊಂದಿರಬೇಕು. ಅಭಿವೃದ್ಧಿಯ ಹೆಸರಿನಲ್ಲಿ ಪೋಲಾಗುವ ಹಣಕ್ಕೂ ಕಡಿವಾಣ ಹಾಕಬೇಕು.

ಧರ್ಮಾನಂದ ಶಿರ್ವ, ಬೆಂಗಳೂರು

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)