ಗುರುವಾರ , ಮೇ 6, 2021
23 °C

ಎಲ್ಲಕ್ಕೂ ಕೋರ್ಟ್‌ ನಿರ್ದೇಶನ ಬೇಕೇ?

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ರಾಜ್ಯದ ಎಲ್ಲಾ 65,911 ಅಂಗನವಾಡಿಗಳಿಗೆ ವಿದ್ಯುತ್ ಸಂಪರ್ಕ ಮತ್ತು ಫ್ಯಾನ್‌ಗಳನ್ನು ಒದಗಿಸಲು ತಕ್ಷಣ ಕ್ರಮ ಕೈಗೊಳ್ಳುವಂತೆ ಹೈಕೋರ್ಟ್ ನಿರ್ದೇಶನ ನೀಡಿರುವುದು ವರದಿಯಾಗಿದೆ (ಪ್ರ.ವಾ., ಏ. 19). ಆಡಳಿತಾತ್ಮಕ ವಿಚಾರಗಳಲ್ಲೂ ಹೈಕೋರ್ಟ್ ನಿರ್ದೇಶನ ಮಾಡುವವರೆಗೂ ಸರ್ಕಾರ ಕಾಯಬೇಕೇ? ಕೋರ್ಟ್‌ನಿಂದ ನಿರ್ದೇಶನ ಪಡೆದು ಕೆಲಸ ಮಾಡುವುದಾದರೆ ಅದಕ್ಕೆ ಸರ್ಕಾರ ಏಕೆ ಬೇಕು? ಅಧಿಕಾರಿಗಳೇ ಮಾಡುತ್ತಾರೆ. ಕೋರ್ಟುಗಳು ಮಾಡುವ ಕೆಲಸ ಬೆಟ್ಟದಷ್ಟಿರುತ್ತದೆ. ಇಂತಹವುಗಳೆಡೆಗೂ ಗಮನ ಹರಿಸಬೇಕಾದ ಪರಿಸ್ಥಿತಿಯನ್ನು ಸರ್ಕಾರ ಒದಗಿಸಕೂಡದು.

ಕೇವಲ ಇದೊಂದೇ ಅಲ್ಲದೆ ವರ್ಗಾವಣೆ, ಪ್ರತಿಭಟನೆ, ಆರೋಗ್ಯ, ರಸ್ತೆ ದುರಸ್ತಿ, ಹವಾಮಾನ, ಸಾರಿಗೆ, ಅಬಕಾರಿ ಮುಂತಾದ ಅನೇಕ ವಿಷಯಗಳಲ್ಲಿ ಕೋರ್ಟ್‌ ಸ್ವಯಂಪ್ರೇರಿತವಾಗಿ ಸರ್ಕಾರಕ್ಕೆ ಸೂಚನೆ ನೀಡುತ್ತಾ ತನ್ನ ಚಾಟಿ ಬೀಸುತ್ತಿರುವುದನ್ನು ಗಮನಿಸಬಹುದು. ಅಷ್ಟರವರೆಗೂ ಸರ್ಕಾರ ಸುಮ್ಮನಿರದೆ ತನ್ನ ಕೆಲಸವನ್ನು ಮಾಡುವಂತಾಗಲಿ.

- ಪತ್ತಂಗಿ ಎಸ್. ಮುರಳಿ, ಬೆಂಗಳೂರು

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು