ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆರ್ಥಿಕ ಸಬಲತೆ ಬೇಕು

Last Updated 2 ಜನವರಿ 2019, 18:44 IST
ಅಕ್ಷರ ಗಾತ್ರ

ರಾಜ್ಯ ಸರ್ಕಾರಗಳ ಕೃಷಿ ಸಾಲ ಮನ್ನಾ ನಿರ್ಧಾರದಿಂದಾಗಿ ಆರ್ಥಿಕತೆಯ ಮೇಲೆ ವ್ಯತಿರಿಕ್ತ ಪರಿಣಾಮಗಳಾಗುತ್ತಿವೆ ಎಂದು ಆರ್.ಬಿ.ಐ. ಎಚ್ಚರಿಕೆ ನೀಡಿದೆ (ಪ್ರ.ವಾ., ಡಿ. 31). ಇತ್ತೀಚೆಗೆ ಎಲ್ಲಾ ಪಕ್ಷಗಳು ತಮ್ಮ ಚುನಾವಣಾ ಪ್ರಣಾಳಿಕೆಯಲ್ಲಿ, ತಾವು ಅಧಿಕಾರಕ್ಕೆ ಬಂದರೆ ರೈತರ ಸಾಲ ಮನ್ನಾ ಮಾಡುವುದಾಗಿ ಘೋಷಿಸಿಕೊಳ್ಳುವುದನ್ನು ರೂಢಿಯಾಗಿಸಿಕೊಂಡಂತೆ ಕಾಣುತ್ತಿದೆ. ಸಾಲ ಮನ್ನಾ ಮಾಡಿದ ನಂತರ, ಆ ಪಕ್ಷದ ಸಚಿವರು, ಶಾಸಕರು ತಮ್ಮ ಸ್ವಂತ ಹಣದಿಂದ ಸಾಲ ಮನ್ನಾ ಮಾಡಿರುವ ರೀತಿಯಲ್ಲಿ ಹೇಳಿಕೆಗಳನ್ನು ಕೊಡುತ್ತಾರೆ.

ಸಾರ್ವಜನಿಕರ ಹಣವನ್ನು ಈ ರೀತಿ ಖರ್ಚು ಮಾಡುವುದರಿಂದ ರೈತರ ಸಮಸ್ಯೆಗಳು ಶಾಶ್ವತವಾಗಿ ಪರಿಹಾರವಾಗುವುದಿಲ್ಲ. ರೈತರಿಗೆ ಅಗತ್ಯವಾಗಿರುವ ನೀರು, ವಿದ್ಯುತ್, ರಿಯಾಯಿತಿ ದರದಲ್ಲಿ ರಸಗೊಬ್ಬರ, ಕೃಷಿ ಉಪಕರಣ ಮತ್ತು ಗುಣಮಟ್ಟದ ಬಿತ್ತನೆ ಬೀಜವನ್ನು ಸರಿಯಾದ ಸಮಯದಲ್ಲಿ ಒದಗಿಸಿಕೊಟ್ಟು, ರೈತರು ಬೆಳೆದ ಬೆಳೆಗೆ ನ್ಯಾಯಯುತ ಬೆಲೆ ಮತ್ತು ಮಾರುಕಟ್ಟೆ ಒದಗಿಸಿಕೊಟ್ಟು ಅವರನ್ನು ಸಬಲರನ್ನಾಗಿ ಮಾಡಬೇಕೇ ವಿನಾ ಅವರನ್ನು ದೈನೇಸಿಗಳನ್ನಾಗಿಸಬಾರದು.

ರೈತರು ಸಾಲದ ಸುಳಿಗೆ ಸಿಲುಕದಂತೆ ನೋಡಿಕೊಳ್ಳುವ ಜವಾಬ್ದಾರಿಯನ್ನು ಚುನಾಯಿತ ಸರ್ಕಾರಗಳು ವಹಿಸಬೇಕು. ಅನ್ನ ಕೊಡುವ ರೈತ ಸಾಲದಿಂದ ನರಳುವಂತಾಗಬಾರದು. ಆಗಮಾತ್ರ ಕೃಷಿಯು ಲಾಭದಾಯಕ ಉದ್ಯಮವಾಗಿ ಬೆಳೆದು, ದೇಶದ ಅಭಿವೃದ್ಧಿ ಸಾಧ್ಯವಾದೀತು.

ಕೆ.ಸಿ. ರತ್ನಶ್ರೀ ಶ್ರೀಧರ್, ಬೆಂಗಳೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT