ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊರೊನಾ ವೈರಸ್‌: ಸುಳ್ಳುಸುದ್ದಿ ಬೇಡ

Last Updated 11 ಫೆಬ್ರುವರಿ 2020, 19:45 IST
ಅಕ್ಷರ ಗಾತ್ರ

ಕೊರೊನಾ ವೈರಸ್ ಬಗ್ಗೆ ಸಾಮಾಜಿಕ ಜಾಲತಾಣಗಳಾದ ವಾಟ್ಸ್ಆ್ಯಪ್ ಮತ್ತು ಫೇಸ್‌ಬುಕ್‌ಗಳಲ್ಲಿ ಕೆಲವರು ಇತ್ತೀಚೆಗೆ ಸುಳ್ಳುಸುದ್ದಿಯನ್ನು ಹರಡುತ್ತಿದ್ದಾರೆ. ರೋಗಿಷ್ಟ ಕೋಳಿಯ ಚಿತ್ರದ ಜೊತೆಗೆ ‘ಇದಕ್ಕೆ ಕೊರೊನಾ ವೈರಸ್ ತಗುಲಿದೆ ಎಂದು ಸರ್ಕಾರ ಘೋಷಣೆ ಮಾಡಿದೆ. ದಯವಿಟ್ಟು ಯಾರೂ ಕೋಳಿಗಳನ್ನು ತಿನ್ನಬೇಡಿ. ಇದನ್ನು ಸಾಧ್ಯವಾದಷ್ಟು ಮಟ್ಟಿಗೆ ಎಲ್ಲ ಗ್ರೂಪ್‌ಗಳಿಗೂ ಶೇರ್ ಮಾಡಿ’ ಎಂಬ ಒಕ್ಕಣೆಯೊಂದಿಗೆ ಹರಿಯಬಿಟ್ಟಿದ್ದಾರೆ! ಯಾವುದು ಸುಳ್ಳುಸುದ್ದಿ, ಯಾವುದು ನಿಜಸುದ್ದಿ ಎಂದು ಯೋಚಿಸದ ಜನ, ಅದನ್ನು ಇನ್ನೊಂದು ಗ್ರೂಪ್‌ಗೆ ಶೇರ್ ಮಾಡುತ್ತಿದ್ದಾರೆ. ಇದರಿಂದ ಜನರಲ್ಲಿ ಭಯದ ವಾತಾವರಣ ಸೃಷ್ಟಿಯಾಗಿದೆ. ಮತ್ತೊಂದು ಕಡೆ, ಕುಕ್ಕುಟೋದ್ಯಮದ ಮೇಲೆ ಪರಿಣಾಮ ಬೀರುವ ಸಂಭವವಿದೆ. ಸೈಬರ್ ಪೊಲೀಸರು ಇಂತಹವರ ಮೇಲೆ ಕಣ್ಣಿಟ್ಟು ಕ್ರಮ ಜರುಗಿಸಬೇಕು.

ರಾಜು ಬಿ. ಲಕ್ಕಂಪುರ,ಜಗಳೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT