ಬುಧವಾರ, ಜನವರಿ 29, 2020
30 °C

ಈರುಳ್ಳಿ ರೈತರ ಕುರಿತು ಕಾಳಜಿ ಇರಲಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಈರುಳ್ಳಿ ಬೆಲೆ ದುಬಾರಿಯಾದರೆ ಗ್ರಾಹಕನಿಗೆ ತುಸು ಹೊರೆಯಾಗುತ್ತದೆ. ಆದರೆ, ಅದು ಇಲ್ಲದೆಯೂ ಅಡುಗೆ ಮಾಡಲು ಸಾಧ್ಯ. ಅದೊಂದು ಐಚ್ಛಿಕ ಆಹಾರ ಪದಾರ್ಥವೇ ಹೊರತು ಅನಿವಾರ್ಯವಲ್ಲ. ಆದರೆ ಈರುಳ್ಳಿ ಬೆಳೆದ ರೈತನಿಗೆ ಆ ಸಮಯದಲ್ಲಿ ಈರುಳ್ಳಿಯೊಂದೇ ಆದಾಯದ ಮೂಲವಾಗಿರುತ್ತದೆ. ಸೂಕ್ತ ಬೆಲೆ ಸಿಗಲಿಲ್ಲವೆಂಬ ಕಾರಣಕ್ಕೆ ರೈತರು ಆತ್ಮಹತ್ಯೆಗೆ ಶರಣಾದ ನಿದರ್ಶನಗಳು ಇವೆ. ಆದರೆ, ಈರುಳ್ಳಿ ಕೊಳ್ಳಲಾಗಲಿಲ್ಲವೆಂದು ಯಾವ ಗ್ರಾಹಕನೂ ಆತ್ಮಹತ್ಯೆ ಮಾಡಿಕೊಂಡ ನಿದರ್ಶನ ಇಲ್ಲ. ದರ ಏರಿಕೆಯನ್ನು ಮಾಧ್ಯಮಗಳು ಏನೋ ಆಗಿಹೋಯಿತು ಎಂಬಂತೆ ಬಿಂಬಿಸುವ ಬದಲು, ರೈತಮುಖಿಯಾಗಿ ಅರೆಕ್ಷಣ ಯೋಚಿಸಬೇಕು.  ಗ್ರಾಹಕರ ಪರವಾಗಿ ಅನುಕಂಪ ತೋರಿಸಿ. ಜೊತೆಗೆ ರೈತನ ಸ್ಥಿತಿಗತಿ ಬಗ್ಗೆಯೂ ಚಿಂತಿಸಿ. 

ಸೋಮಲಿಂಗಪ್ಪ, ಬೆಣ್ಣಿಗುಳದಳ್ಳಿ

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು