ಗುರುವಾರ , ಅಕ್ಟೋಬರ್ 28, 2021
18 °C

ಪೆಟ್ರೋಲ್ ಬಂಕ್‍ ಗ್ರಾಹಕಸ್ನೇಹಿ ಆಗಲಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ದೇಶದಾದ್ಯಂತ ಎಲ್ಲ ಪೆಟ್ರೋಲ್ ಬಂಕ್‍ಗಳಲ್ಲಿ ವಾಹನಗಳ ಗಾಲಿಯ ಗಾಳಿ ಪರೀಕ್ಷೆ, ಕುಡಿಯುವ ನೀರು, ಶೌಚಾಲಯದಂಥ ಕನಿಷ್ಠ ಸೌಲಭ್ಯಗಳನ್ನು ಒದಗಿಸುವುದು ಕಡ್ಡಾಯವೆಂದು ತೈಲ ಕಂಪನಿಗಳು ಹೇಳುತ್ತವೆ. ಆದರೆ ಕೆಲವೇ ಕೆಲವು ದೊಡ್ಡ ದೊಡ್ಡ ಪೆಟ್ರೋಲ್ ಬಂಕ್‍ಗಳನ್ನು ಹೊರತುಪಡಿಸಿದರೆ ಬಹುತೇಕ ಪೆಟ್ರೋಲ್ ಬಂಕ್‍ಗಳಲ್ಲಿ ಈ ಯಾವ ವ್ಯವಸ್ಥೆಯೂ ಇರುವುದಿಲ್ಲ. ವಿಶೇಷವಾಗಿ ಗ್ರಾಮೀಣ ಪ್ರದೇಶದ ಬಂಕ್‍ಗಳಲ್ಲಿ ಇಂತಹ ವ್ಯವಸ್ಥೆಗಳನ್ನು ಕಲ್ಪಿಸಿಕೊಳ್ಳುವುದೂ ಕಷ್ಟ. ನೆಪಕ್ಕೆಂಬಂತೆ ಒಂದು ಗಾಳಿ ಪರೀಕ್ಷಕ ಯಂತ್ರವನ್ನು ಒಂದು ಮೂಲೆಯಲ್ಲಿ ಸ್ಥಾಪಿಸಿದ, ನಿರ್ವಹಣೆ ಇಲ್ಲದೆ ತುಕ್ಕು ಹಿಡಿದಿರುವ ಯಂತ್ರೋಪಕರಣಗಳು ಎಲ್ಲ ಬಂಕ್‍ಗಳಲ್ಲಿ ಸಾಮಾನ್ಯ ದೃಶ್ಯ.

ಬಂಕ್‍ಗಳ ವ್ಯವಸ್ಥೆ- ನಿರ್ವಹಣೆಯನ್ನು ಗಮನಿಸಲೆಂದೇ ತೈಲ ಕಂಪನಿಗಳು ಕೈತುಂಬ ವೇತನ ಪಾವತಿಸಿ, ಉಸ್ತುವಾರಿ ಅಧಿಕಾರಿಗಳನ್ನು ನೇಮಕ ಮಾಡಿರುತ್ತವೆ. ಆದರೂ ಅವ್ಯವಸ್ಥೆಗಳನ್ನು ಸರಿಪಡಿಸಲಾಗಿಲ್ಲ. ಮುಂದಿನ ದಿನಗಳಲ್ಲಾದರೂ ಸಂಬಂಧಿತ ಅಧಿಕಾರಿಗಳು ಈ ಬಗ್ಗೆ ಗಮನಹರಿಸಿ ಗ್ರಾಹಕರಿಗೆ ಸೂಕ್ತ ಅನುಕೂಲಗಳನ್ನು ಒದಗಿಸುವ ಪ್ರಯತ್ನ ಮಾಡಲಿ.

– ಡಾ. ಚೆನ್ನು ಅ. ಹಿರೇಮಠ, ರಾಣೆಬೆನ್ನೂರು

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು