ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಾಚಕರ ವಾಣಿ: ಜನಪದ ತಿಂಡಿ ಉಳಿಸಿದ ಪಿತೃಪಕ್ಷ

Last Updated 17 ಸೆಪ್ಟೆಂಬರ್ 2020, 19:31 IST
ಅಕ್ಷರ ಗಾತ್ರ

ಮಂಡ್ಯದ ಗ್ರಾಮೀಣ ಪ್ರದೇಶದಲ್ಲಿ ಪಿತೃಪಕ್ಷವನ್ನು ಮಾರ್ನೋಮಿ ಹಬ್ಬ ಎಂದೇ ಕರೆಯುತ್ತಾರೆ. ‘ಮಗನ ಮಾರಾದ್ರೂ ಮಾರ್ನೋಮಿ ಹಬ್ಬ ಮಾಡು’ ಎಂಬ ಗಾದೆ ಇದೆ. ಮೇಲ್ನೋಟಕ್ಕೆ ಮೌಢ್ಯದ ಆಚರಣೆಯಂತೆ ಕಂಡರೂ ಗತಿಸಿದ ಹಿರಿಯರನ್ನು ನೆನಪಿಸಿಕೊಳ್ಳುವ ಹಬ್ಬವೆಂಬುದು ಸತ್ಯ.

ಈ ಸಂದರ್ಭದಲ್ಲಿ ಶ್ರಾದ್ಧ, ತರ್ಪಣದಂತಹ ಆಚರಣೆ ಈ ಭಾಗದಲ್ಲಿ ಇಲ್ಲ. ಪೂರ್ವಿಕರು ಬಳಕೆ ಮಾಡುತ್ತಿದ್ದ ತಿಂಡಿ-ತಿನಿಸುಗಳಾದ ಕಜ್ಜಾಯ, ವಡೆ, ಎಳ್ಳಿನಿಂದ ಮಾಡಿದ ಚಿಕ್ಕಿನುಂಡೆ, ಚಕ್ಕುಲಿ, ಕರ್ಜಿಕಾಯಿ, ರವೆಉಂಡೆ, ಕೋಡುಬಳೆ, ಒಬ್ಬಟ್ಟಿನಂತಹ ಪದಾರ್ಥಗಳನ್ನು ಎಡೆಯಿಡುವ ಪದ್ಧತಿ ಇದೆ.

ಏನೇ ಆಗಲಿ, ಈ ಹಬ್ಬದಿಂದ ಜನಪದ ತಿಂಡಿಗಳಂತೂ ಉಳಿದುಕೊಂಡು ಬಂದಿವೆ. ಇಲ್ಲವಾಗಿದ್ದರೆ ಬೇಕರಿ ತಿಂಡಿ, ಉತ್ತರ ಭಾರತದ ತಿಂಡಿಗಳ ನಡುವೆ ಹಳ್ಳಿ ಸೊಗಡಿನ ಜನಪದ ತಿಂಡಿಗಳು ಕಾಣೆಯಾಗಿರುತ್ತಿದ್ದವು. ಈ ಹಬ್ಬ ಒಂದುಕಡೆ ಪೂರ್ವಜರನ್ನು ನೆನಪಿಸಿದರೆ ಮತ್ತೊಂದು ಕಡೆ ಜನಪದ ತಿಂಡಿ-ತಿನಿಸುಗಳನ್ನು ಈಗಿನ ಪೀಳಿಗೆಗೆ ಪರಿಚಯ ಮಾಡುತ್ತದೆ.

ಸಿ.ಸಿದ್ದರಾಜು ಆಲಕೆರೆ,ಮಂಡ್ಯ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT