ಮಂಗಳವಾರ, ಅಕ್ಟೋಬರ್ 27, 2020
28 °C

ಸಮೀಪದ ಕೇಂದ್ರದಿಂದ ಅನುಕೂಲ

ವಾಚಕರವಾಣಿ Updated:

ಅಕ್ಷರ ಗಾತ್ರ : | |

ಪೊಲೀಸ್ ಇಲಾಖೆಯು ಅಕ್ಟೋಬರ್‌ನಲ್ಲಿ ಕೆಎಸ್ಐಎಸ್ಎಫ್ ಹಾಗೂ ರಿಸರ್ವ್ ಪೊಲೀಸ್ ಸಬ್ ಇನ್‌ಸ್ಪೆಕ್ಟರ್ ಹುದ್ದೆಗಳಿಗೆ ದೇಹದಾರ್ಢ್ಯ ಪರೀಕ್ಷೆ ನಡೆಸಲು ತಯಾರಿ ನಡೆಸಿದೆ. ಆಯ್ದ ಕೆಲವು ಸ್ಥಳಗಳಲ್ಲಿ ದೈಹಿಕ ಸಾಮರ್ಥ್ಯ ಪರೀಕ್ಷೆ ನಡೆಸಲಾಗುತ್ತದೆ. ಶಿವಮೊಗ್ಗದ ಅಭ್ಯರ್ಥಿಗಳು ಮಂಗಳೂರಿಗೆ ತೆರಳಬೇಕು. ಮಂಗಳೂರಿಗೆ ಹೋಲಿಸಿದರೆ ನಮಗೆ ದಾವಣಗೆರೆ ಸಮೀಪ ಹಾಗೂ ಸುಗಮ ದಾರಿ. ನಾವು ಮಂಗಳೂರಿಗೆ ಹುಲಿಕಲ್ ಅಥವಾ ಆಗುಂಬೆ ಘಾಟಿ ಮೂಲಕ ತೆರಳಬೇಕಾಗುತ್ತದೆ.

ಮಳೆಗಾಲದ ಸಮಯದಲ್ಲಿ ಕೆಲವೊಮ್ಮೆ ದಾರಿಗಳು ಮುಚ್ಚುವ, ಗುಡ್ಡ ಕುಸಿಯುವ ಸಾಧ್ಯತೆ ಇರುತ್ತದೆ. ಇದರಿಂದ ಹಾಜರಾಗಲು ಕಷ್ಟವಾಗಬಹುದು. ಬದಲಾಗಿ ಸಮೀಪದ ದಾವಣಗೆರೆ ಕೇಂದ್ರವನ್ನು ನೀಡಿದರೆ ಅಭ್ಯರ್ಥಿಗಳಿಗೆ ಅನುಕೂಲವಾಗುತ್ತದೆ. ಮುಂದಿನ ನೇಮಕಾತಿಗಳಲ್ಲಿ ಕೇಂದ್ರಗಳ ಸಂಖ್ಯೆಯನ್ನು ಹೆಚ್ಚಿಸಿದರೆ ಇನ್ನೂ ಅನುಕೂಲ.

ಶ್ವೇತಾ ಎನ್. ಸೊರಬ, ಶಿವಮೊಗ್ಗ

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.