ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಾಚಕರ ವಾಣಿ: ರಾಜಕಾರಣಿಗಳಿಗೆ ಖಾಸಗಿ ಬದುಕು ಇಲ್ಲವೇ?

Last Updated 25 ಆಗಸ್ಟ್ 2020, 16:19 IST
ಅಕ್ಷರ ಗಾತ್ರ

ಹಾಸನ ಜಿಲ್ಲಾ ಉಸ್ತುವಾರಿ ಸಚಿವ ಗೋಪಾಲಯ್ಯ ಅವರು ಇತ್ತೀಚೆಗೆ ಜೆಡಿಎಸ್‌ ಮುಖಂಡ ಎಚ್‌.ಡಿ.ದೇವೇಗೌಡರ ಮನೆಗೆ ಹೋಗಿ ಊಟ ಮಾಡಿದ್ದು ಮಾಧ್ಯಮದಲ್ಲಿ ಸುದ್ದಿಯಾಗಿದೆ. ಹಾಗೆಯೇ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರ ಮಗಳ ಮದುವೆಯು ಬಿಜೆಪಿ ಮುಖಂಡ ಎಸ್‌.ಎಂ.ಕೃಷ್ಣ ಅವರ ಮೊಮ್ಮಗನ ಜೊತೆ ನಿಶ್ಚಯವಾಗಿದ್ದು, ಬಿಜೆಪಿ ಸಂಸದ ಪಿ.ಸಿ.ಮೋಹನ್ ಅವರ ಮಗಳ ನಿಶ್ಚಿತಾರ್ಥವು ಕಾಂಗ್ರೆಸ್‌ ಮುಖಂಡ ಆರ್‌.ವಿ.ದೇವರಾಜ್‌ ಅವರ ಮಗನ ಜೊತೆ ಆಗಿರುವುದು ಎಲ್ಲವೂ ಸುದ್ದಿಯಾಗಿವೆ.

ಯಾವುದೇ ರಾಜಕಾರಣಿ ಖಾಸಗಿ ಬದುಕಿನಿಂದ ಹೊರತಾಗಿ ಇರುವುದಿಲ್ಲ. ರಾಜಕಾರಣ, ರಾಜಕೀಯ ಭಿನ್ನಾಭಿಪ್ರಾಯಗಳ ಮಧ್ಯೆಯೂ ರಾಜಕಾರಣಿಗಳ ನಡುವಿನ ವೈಯಕ್ತಿಕ ಸಂಬಂಧ ಚೆನ್ನಾಗಿರಬೇಕು. ಇದು ಹಿಂದಿನಿಂದ ಪಾಲಿಸಿಕೊಂಡು ಬಂದಿರುವ ಪರಿಪಾಟ. ಇಂತಹ ಸಂಗತಿಗಳು ಸಾದಾಸೀದಾ ವರದಿಗಳಾಗಿ ಪ್ರಕಟವಾದರೆ ತಪ್ಪೇನಿಲ್ಲ. ಆದರೆ ಮಾಧ್ಯಮಗಳು ಇತ್ತೀಚೆಗೆ ರಾಜಕೀಯ ಮುಖಂಡರ ಖಾಸಗಿ ಬದುಕನ್ನು ವೈಭವೀಕರಿಸುತ್ತಿವೆ. ಅತಿರಂಜಿತ ವರದಿಗಳ ಮೂಲಕ ಇಂತಹ ಸಂಬಂಧಗಳನ್ನೇ ಪ್ರಶ್ನೆ ಮಾಡುತ್ತಿವೆ. ಇಂತಹ ನಡೆ ಎಷ್ಟು ಸರಿ? ಇದು ನಮ್ಮ ಪರಂಪರೆ ಮತ್ತು ಸಾಂಸ್ಕೃತಿಕ ಸಂಬಂಧಗಳ ಮೇಲೆ ಕೆಟ್ಟ ಪರಿಣಾಮ ಬೀರುವುದಿಲ್ಲವೇ?

-ಟಿ.ಪ್ರಭಾಕರ್‌,ಬೆಂಗಳೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT