ಭಾನುವಾರ, ಸೆಪ್ಟೆಂಬರ್ 20, 2020
22 °C

ವಾಚಕರವಾಣಿ | ರಾಜಕಾರಣಿಗಳು ಆತ್ಮಾವಲೋಕನ ಮಾಡಿಕೊಳ್ಳಲಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಜೀವನದ ಅಂತಿಮ ದಿನಗಳಲ್ಲಿ ಮನುಷ್ಯನನ್ನು ಆಂತರ್ಯದಲ್ಲಿ ಈ ಎರಡು ಪ್ರಶ್ನೆಗಳು ಕಾಡುತ್ತವೆ– ‘ನಾನು ಆತ್ಮಸಾಕ್ಷಿಗೆ ಅನುಗುಣವಾಗಿ ಮತ್ತು ನ್ಯಾಯಯುತವಾಗಿ ಬಾಳಿದ್ದೇನೆಯೇ? ನನ್ನನ್ನು ಸಮಾಜವು ಯೋಗ್ಯನೆಂದು ಪರಿಗಣಿಸಿದೆಯೇ?’ ಉತ್ತರವು ಇತ್ಯಾತ್ಮಕವಾಗಿದ್ದರೆ ಆ ವ್ಯಕ್ತಿಯ ಕೊನೆಯ ದಿನಗಳು ತೃಪ್ತಿ, ಸಂತೋಷದಿಂದ ಕೂಡಿರುತ್ತವೆ. ಇಂಥ ತೃಪ್ತಿಯು ಆತನ ಮುಂದಿರುವ ಎಲ್ಲಾ ದುಃಖಗಳನ್ನು ಮರೆಸಬಲ್ಲಷ್ಟು ಘನವಾದುದಾಗಿರುತ್ತದೆ. ಉತ್ತರಗಳು ನೇತ್ಯಾತ್ಮಕವಾಗಿದ್ದರೆ ಅವನ ಅಂತಿಮ ದಿನಗಳು ಹತಾಶೆಯಿಂದ ಕೂಡಿದವೂ ಅಸಹನೀಯವೂ ಆಗಿರುತ್ತವೆ. ಆ ನೋವು, ಅವನ ಸುಖ–ಸಂತೋಷವನ್ನು ನುಂಗಿ ನೊಣೆಯುವಷ್ಟು ಭೀಕರವಾದುದಾಗಿರುತ್ತದೆ.

ಕರ್ನಾಟಕದ ರಾಜಕಾರಣದಲ್ಲಿ ನಡೆಯುತ್ತಿರುವ ಅಸಹ್ಯಕರ ಬೆಳವಣಿಗೆಗಳನ್ನು ಕಂಡು ಈ ಮಾತುಗಳನ್ನು ಹೇಳುತ್ತಿದ್ದೇನೆ. ಹಿರಿಯರಾದ ದೇವೇಗೌಡರಿಂದ ಮೊದಲ್ಗೊಂಡು, ‘ಪಕ್ಷಾತೀತ’ರಾಗಿ ಇರಬೇಕಾದ ಸ್ಪೀಕರ್ ರಮೇಶ್‌ ಕುಮಾರ್ ಅವರೂ ಸೇರಿದಂತೆ ಎಲ್ಲ ರಾಜಕಾರಣಿಗಳೂ ಒಮ್ಮೆ ಆತ್ಮಾವಲೋಕನ ಮಾಡಿಕೊಳ್ಳಬೇಕು.

-ಎಚ್.ಆನಂದರಾಮ ಶಾಸ್ತ್ರೀ, ಬೆಂಗಳೂರು

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು