ಶನಿವಾರ, ಅಕ್ಟೋಬರ್ 1, 2022
23 °C

ವಾಚಕರ ವಾಣಿ: ಮೌಲ್ಯಮಾಪಕರಿಗೆ ಬೇಕು ಬದ್ಧತೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಈ ಬಾರಿಯ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಅನುತ್ತೀರ್ಣರಾದವರ ಪೈಕಿ 219 ವಿದ್ಯಾರ್ಥಿಗಳು ಮರುಮೌಲ್ಯಮಾಪನದಲ್ಲಿ ಹೆಚ್ಚಿನ ಅಂಕಗಳನ್ನು ಪಡೆದು ಉತ್ತೀರ್ಣರಾಗಿರುವುದು ವರದಿಯಾಗಿದೆ (ಪ್ರ.ವಾ., ಆ.5). ಅದರಲ್ಲೂ 40 ಅಂಕ ಗಳಿಸಿದ್ದ ವಿದ್ಯಾರ್ಥಿಯೊಬ್ಬರಿಗೆ ಮರುಮೌಲ್ಯಮಾಪನದ ನಂತರ 99 ಅಂಕಗಳು ಲಭಿಸಿವೆ. ಈ ಸುದ್ದಿಯು ವಿದ್ಯಾರ್ಥಿಗಳು ಮತ್ತು ಪೋಷಕರಲ್ಲಿ ನಿಜಕ್ಕೂ ಗಾಬರಿ ಮೂಡಿಸುವಂತಹುದು.

ಎಷ್ಟು ಮಂದಿಗೆ ಮರುಮೌಲ್ಯಮಾಪನಕ್ಕೆ ಅರ್ಜಿ ಹಾಕುವ ತಾಳ್ಮೆ ಮತ್ತು ಹಣ ಇರುತ್ತದೆ? ನಪಾಸಾದ ವಿದ್ಯಾರ್ಥಿಯು ಒಂದು ವೇಳೆ ದುಡುಕಿ ತನ್ನ ಜೀವಕ್ಕೇ ಕೇಡು ಮಾಡಿಕೊಂಡ ನಂತರ ಉತ್ತೀರ್ಣ ಎಂಬ ಫಲಿತಾಂಶ ಬಂದರೆ ಅದರ ಹೊಣೆ ಯಾರದ್ದು? ಉತ್ತರಪತ್ರಿಕೆ ಉತ್ತರಗಳನ್ನು ಪರಿಶೀಲಿಸುವ ಮೌಲ್ಯಮಾಪಕರು ಅಂಕಗಳನ್ನು ಕೂಡುವಾಗ ತಪ್ಪು ಮಾಡುವುದೇಕೆ? ಅದು ಉದಾಸೀನವೇ? ಅಥವಾ ಹೆಚ್ಚಿನ ಒತ್ತಡವೇ? ವಿದ್ಯಾರ್ಥಿಗಳ ಭವಿಷ್ಯವನ್ನು ರೂಪಿಸುವ ಮೌಲ್ಯಮಾಪಕರಿಗೆ ಹೆಚ್ಚಿನ ಬದ್ಧತೆ ಇರಬೇಕು.

ಪತ್ತಂಗಿ ಎಸ್. ಮುರಳಿ, ಬೆಂಗಳೂರು

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು