ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಾಚಕರ ವಾಣಿ | ಆಟಗಾರರ ಆಯ್ಕೆ: ಪಾರದರ್ಶಕ ವ್ಯವಸ್ಥೆ ಬೇಕು

Last Updated 9 ಆಗಸ್ಟ್ 2022, 22:00 IST
ಅಕ್ಷರ ಗಾತ್ರ

ಈ ಬಾರಿಯ ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ ಭಾರತದ ಸಾಧನೆ ತೃಪ್ತಿಕರವಾಗಿದೆಯಾದರೂ ಕ್ರೀಡಾಪಟುಗಳ ಆಯ್ಕೆ ಪ್ರಕ್ರಿಯೆಯಲ್ಲಿ ಪ್ರಮಾದಗಳು ಆಗಿವೆ. ಸ್ಪರ್ಧಾಳುಗಳ ಆಯ್ಕೆ ಪಾರದರ್ಶಕವಾಗಿರಲಿಲ್ಲ ಅನ್ನುವುದಕ್ಕೆ ತೇಜಸ್ವಿನ್ ಶಂಕರ್ ಅವರಿಗೆ ಹೈಜಂಪ್‌ನಲ್ಲಿ ಭಾಗವಹಿಸುವ ಎಲ್ಲ ಅರ್ಹತೆಗಳಿದ್ದರೂ ಮೊದಲಿಗೆ ಆಯ್ಕೆಯಾಗದಿದ್ದುದೇ ನಿದರ್ಶನ. ಅನಿವಾರ್ಯವಾಗಿ ಹೈಕೋರ್ಟ್ ಮೆಟ್ಟಿಲೇರಿ ಅವರು ಸ್ಥಾನ ಪಡೆದರು. ಇದೆಲ್ಲದರಿಂದ ಮಾನಸಿಕವಾಗಿ ಕುಗ್ಗಿ ಹೋಗಿದ್ದರ ನಡುವೆಯೂ ಕಂಚಿನ ಪದಕ ಗೆದ್ದರು.

ಆದರೆ ಅದೆಷ್ಟೋ ಕ್ರೀಡಾಪಟುಗಳು ಹೀಗೆ ಅನ್ಯಾಯಕ್ಕೆ ಒಳಗಾಗಿ ಮೊಳಕೆಯಲ್ಲೇ ಕಮರಿ ಹೋಗುವ ಸಾಧ್ಯತೆ ಇರುತ್ತದೆ. ಇದಕ್ಕೆ ಕಾರಣರಾದ ದುಷ್ಟಶಕ್ತಿಗಳನ್ನು ಪತ್ತೆ ಮಾಡಿ ದಂಡಿಸಬೇಕು. ಆಟಗಾರರನ್ನು ಆಯ್ಕೆ ಮಾಡುವ ವ್ಯವಸ್ಥೆಗೆ ಭರ್ಜರಿ ಸರ್ಜರಿ ಆಗಬೇಕು.

-ಹನುಮಂತಪ್ಪ,ನರಗುಂದ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT