ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಾಚಕರ ವಾಣಿ | ಪ್ರೋತ್ಸಾಹ ಮೊದಲೇ ಸಿಗಲಿ

Last Updated 10 ಆಗಸ್ಟ್ 2022, 22:15 IST
ಅಕ್ಷರ ಗಾತ್ರ

ಪ್ರತಿಷ್ಠಿತ ಕ್ರೀಡಾಕೂಟಗಳಲ್ಲಿಪದಕ ಗಳಿಸಿದ ದೇಶದ ಕ್ರೀಡಾಪಟುಗಳಿಗೆ ಸರ್ಕಾರ, ಕ್ರೀಡಾ ಸಂಸ್ಥೆಗಳು ಮತ್ತು ಉದ್ಯಮಿಗಳು ನಗದು ಬಹುಮಾನ ಘೋಷಿಸುವುದು ವಾಡಿಕೆ. ಪದಕ ಗಳಿಸಿದ ನಂತರದ ಈ ಪ್ರೋತ್ಸಾಹಕ ಕ್ರಮ ಸ್ವಾಗತಾರ್ಹ. ಆದರೆ, ಪದಕ ಪಡೆಯಲು ಬೇಕಾದ ಸೌಲಭ್ಯ, ಹಣಕಾಸಿನ ನೆರವು ಇದಕ್ಕಿಂತ ಮುಖ್ಯವಾದುದು. ಭರವಸೆಯಕ್ರೀಡಾಪಟುಗಳಿಗೆ ಅಗತ್ಯ ಸಂದರ್ಭದಲ್ಲಿ ಸೂಕ್ತ ನೆರವು, ಪ್ರೋತ್ಸಾಹ ದೊರೆತರೆ ಪದಕ ಪಟ್ಟಿಯಲ್ಲಿ ಭಾರತ ಇನ್ನೂ ಮೇಲೇರುತ್ತದೆ.

ನಮ್ಮ ಅನೇಕ ಶಾಲಾ ಕಾಲೇಜುಗಳಿಗೆ ಸರಿಯಾಗಿ ಆಟದ ಮೈದಾನ ಇರುವುದಿಲ್ಲ. ಸರ್ಕಾರಿ ಶಾಲೆಗಳಲ್ಲಿ ಕ್ರೀಡಾ ಸಾಮಗ್ರಿಗಳು ಇರುವುದಿಲ್ಲ. ಇಂತಹ ಕೊರತೆಗಳ ನಡುವೆ ಉತ್ತಮ ಕ್ರೀಡಾಪಟುಗಳು ರೂಪುಗೊಳ್ಳುವುದು ಹೇಗೆ? ಪದಕ ಗಳಿಸುವುದಾದರೂ ಹೇಗೆ?

ಚನ್ನಕೇಶವ ಜಿ.ಕೆ.,ತರೀಕೆರೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT