ಶಾಲಾ ಪ್ರವೇಶ: ವಯೋಮಿತಿ ಗೊಂದಲ

ಒಂದನೇ ತರಗತಿ ದಾಖಲಾತಿಗೆ ಕನಿಷ್ಠ ಆರು ವರ್ಷ ಕಡ್ಡಾಯಗೊಳಿಸಿರುವ ಸರ್ಕಾರದ ನಿರ್ಧಾರವು ಹಲವು ಪೋಷಕರಲ್ಲಿ ಆತಂಕ ಹೆಚ್ಚಿಸಿದೆ. ಈ ನಿರ್ಧಾರದ ಅನುಷ್ಠಾನದಿಂದ, ಕೆಲವು ದಿನಗಳ ವಯಸ್ಸಿನ ವ್ಯತ್ಯಾಸವಿರುವ ಮಕ್ಕಳು ಒಂದು ಶೈಕ್ಷಣಿಕ ವರ್ಷವನ್ನು ಕಳೆದುಕೊಳ್ಳುವಂತಾಗಿದೆ. ಈಗಾಗಲೇ ಎಲ್ಕೆಜಿ, ಯುಕೆಜಿ ಮುಗಿಸಿರುವ ಮಕ್ಕಳು ವಯಸ್ಸಿನ ಕಾರಣಕ್ಕೆ ಮತ್ತೆ ಅದೇ ತರಗತಿಯಲ್ಲಿ ಕುಳಿತುಕೊಳ್ಳುವುದು ಅವರ ಮಾನಸಿಕ ಉತ್ಸಾಹವನ್ನು ಕುಗ್ಗಿಸುತ್ತದೆ. ಪೋಷಕರಿಗೆ ಇದು ಆರ್ಥಿಕ ಹೊರೆಯೂ ಹೌದು. ಹಾಗಾಗಿ, ವಯೋಮಿತಿಗೆ ಸಂಬಂಧಿಸಿದ ನಿರ್ಧಾರವನ್ನು ಸರ್ಕಾರ ಸಡಿಲಿಸುವುದು ಅಗತ್ಯ.

ಸಂಧ್ಯಾ ಎಚ್.ಎಸ್., ಹಂಪಿ

‘ಜಾತಿ ದೆವ್ವ’ ಮನೋವೈಕಲ್ಯದ ಪ್ರತಿರೂಪ

ದೇವಿಯ ದರ್ಶನಕ್ಕೆ ಹೋಗಿದ್ದ ಪರಿಶಿಷ್ಟ ಜಾತಿಯ ನವ ದಂಪತಿಯನ್ನು ದೇಗುಲದಿಂದ ಹೊರಗೆ ಕಳುಹಿಸಿರುವ ಘಟನೆ ತುಮಕೂರು ಜಿಲ್ಲೆಯಲ್ಲಿ ವರದಿಯಾಗಿದೆ. ಪರಿಶಿಷ್ಟರನ್ನು ಹೊರದಬ್ಬಿರುವವರೂ ಹಿಂದುಳಿದ ಜಾತಿಯವರೇ ಆಗಿದ್ದಾರೆ. ಊರಿನ ಎಲ್ಲರೂ ಒಗ್ಗಟ್ಟಾಗಿ ನಿಂತು ಯಾವ ದೆವ್ವದ ವಿರುದ್ಧ ಹೋರಾಟ ಮಾಡಬೇಕಾಗಿತ್ತೋ, ಒಳಗೊಳಗೆ ಅದನ್ನೇ ಒಲಿಸಿಕೊಂಡು ಒಬ್ಬರಿಗೊಬ್ಬರು ಇತರರ ಮೇಲೆ ಭಯ ಹುಟ್ಟಿಸುವ ಕೆಲಸ ಮಾಡುತ್ತಾ, ದೆವ್ವವನ್ನು ಊರೊಳಗೆ ಉಳಿಸಿಕೊಂಡಂತಾಗಿದೆ. ಹೀಗಿರುವಾಗ, ಈ ಶ್ರೇಣೀಕೃತ ಜಾತಿ ದೆವ್ವವನ್ನು ಹೇಗೆ ಓಡಿಸುವುದು? ಜಾತಿ ವ್ಯವಸ್ಥೆಯ ಬಲೆಗೆ ಬಿದ್ದಿರುವ ಸಮಾಜ ಸಾವಿರಾರು ವರ್ಷಗಳಿಂದ ಮೇಲೇಳಲಾಗದೆ ಹೇಗೆ ನರಳುತ್ತಿದೆ ಎಂಬುದನ್ನು ಅಧ್ಯಯನ ಮಾಡಿ, ಹೋರಾಟ ಮಾಡಿದ ಅಂಬೇಡ್ಕರ್ ಅವರ ಶ್ರಮಕ್ಕೆ ಜನರು ಬೆಲೆ ಕೊಡುತ್ತಿಲ್ಲವೆ? ಅಥವಾ ಸರ್ಕಾರಕ್ಕೂ ಜಾತಿ ದೆವ್ವದ ಸಂಬಂಧ ಇದ್ದು, ಸರಿಯಾದ ಸಮಾಜ ಶಿಕ್ಷಣವನ್ನು ನೀಡುತ್ತಿಲ್ಲವೆ?

ತಾ.ಸಿ. ತಿಮ್ಮಯ್ಯ, ಬೆಂಗಳೂರು

ಸಮಾಜದ ವ್ಯಾಧಿಗಳಿಗೆ ‘ಸರ್ವಜ್ಞ ಮದ್ದು’

ಮಹಾಕವಿ ಸರ್ವಜ್ಞ ಐನೂರು ವರ್ಷಗಳ ಹಿಂದೆಯೇ ಜಾತಿಯ ಕಾರಣದಿಂದ ಅಸಮಾನತೆ, ಕೀಳರಿಮೆ ತೋರಬಾರದೆಂದು ನುಡಿದಿದ್ದಾರೆ. ಪ್ರತಿಭೆ ಎನ್ನುವುದು ಜಾತಿಯ ನೆಲೆಗಟ್ಟಿನ ಕಾರಣದಿಂದ ಬರುವುದಿಲ್ಲ; ಸತತ ಪ್ರಯತ್ನ ಮತ್ತು ಪ್ರಬಲ ಇಚ್ಛಾಶಕ್ತಿಯಿಂದ ಗಳಿಸಿಕೊಳ್ಳಲು ಸಾಧ್ಯ ಎಂಬುದು ಕವಿಯ ಅಭಿಪ್ರಾಯ. ದುರದೃಷ್ಟಕರ ಸಂಗತಿಯೆಂದರೆ, ದಾರ್ಶನಿಕ ಕವಿ ಸರ್ವಜ್ಞನನ್ನು ನೆನಪಿಸಿಕೊಳ್ಳುವ ಪ್ರಯತ್ನಗಳು ಸರಿಯಾಗಿ ನಡೆದಿಲ್ಲ. ಸರ್ವಜ್ಞ ರಚಿಸಿದ ತ್ರಿಪದಿಗಳು ಅಪೂರ್ವ ಜ್ಞಾನದ ಭಂಡಾರ. ಅವುಗಳ ಮೂಲಕ ಸಮಾಜದ ವ್ಯಾಧಿಗಳಿಗೆ ಚಿಕಿತ್ಸೆಯನ್ನೂ ನೀಡಿದ್ದಾನೆ. ಆ, ತ್ರಿಪದಿಗಳ ಸಾರವನ್ನು ಜನಸಮುದಾಯಕ್ಕೆ ತಲಪಿಸುವ ಕೆಲಸ ನಡೆಯುತ್ತಿಲ್ಲ. ಆತನ ಸಂದೇಶ ತಲಪಿಸುವ ಯೋಜನೆ ರೂಪಿಸಬೇಕಿದೆ.

ಮಲ್ಲಪ್ಪ ಫ. ಕರೇಣ್ಣನವರ, ಹಾವೇರಿ

‘ಬ’ಕಾರದ ಜಿಲ್ಲೆಯಲ್ಲೇ ಗಲಭೆ ಸೃಷ್ಟಿ ಏಕೆ?

ವರ್ಷಾರಂಭದಲ್ಲಿ ಬಳ್ಳಾರಿಯಲ್ಲಿ ವಾಲ್ಮೀಕಿ ಪ್ರತಿಮೆ ಅನಾವರಣ ಕಾರ್ಯಕ್ರಮದ ಬ್ಯಾನರ್ ಕಟ್ಟುವ ವಿಚಾರದಲ್ಲಿ ಗಲಾಟೆಯಾಯಿತು. ತಿಂಗಳು ಉರುಳಿದರೂ ಪ್ರತಿಮೆಯ ಅನಾವರಣ ಆಗಿಲ್ಲ. ಫೆಬ್ರುವರಿಯಲ್ಲೂ ರಾಜ್ಯದ ಅಲ್ಲಲ್ಲಿ ಗಲಭೆ ಕಾಣಿಸಿಕೊಂಡಿದೆ. ಬಾಗಲಕೋಟೆಯಲ್ಲಿ ಶಿವಾಜಿ ಜಯಂತಿಯ ಮೆರವಣಿಗೆ ಮೇಲೆ ಕಲ್ಲುತೂರಾಟ ನಡೆಸಿದ್ದರಿಂದ ಉದ್ವಿಗ್ನ ಸ್ಥಿತಿ ತಲೆದೋರಿದೆ. ಬೆಳಗಾವಿ ತಾಲ್ಲೂಕಿನ ಮಚ್ಚೆ ಗ್ರಾಮದಲ್ಲಿ ಸಂಗೊಳ್ಳಿ ರಾಯಣ್ಣನ ಪ್ರತಿಮೆಗೆ ಮಸಿ ಹಚ್ಚಿರುವ ಕಿಡಿಗೇಡಿಗಳ ಬಂಧನಕ್ಕೆ ಸ್ಥಳೀಯರು ಆಗ್ರಹಿಸಿದ್ದಾರೆ. ಒಟ್ಟಿನಲ್ಲಿ ‘ಬ’ಕಾರದ ಅಕ್ಷರದಿಂದ ಆರಂಭವಾಗುವ ಜಿಲ್ಲೆಗಳಲ್ಲೇ ಗಲಭೆಗಳು ಸಂಭವಿಸುತ್ತಿರುವಂತಿದೆ. ಈ ಗಲಭೆಗಳ ಬಗ್ಗೆ ಸಮಗ್ರ ತನಿಖೆ ನಡೆದು, ಸತ್ಯ ಹೊರಬರಲಿ. ‘ಬ’ ಭಯ ಸೃಷ್ಟಿಸದಿರಲಿ.

ಧನ್ವಂತರಿ ಮನ್ವಿ, ಬಳ್ಳಾರಿ

ರಂಗಶಿಕ್ಷಕರ ನೇಮಕ ವರ್ತಮಾನದ ತುರ್ತು

ರಂಗಭೂಮಿ ಶಿಕ್ಷಕರ ನೇಮಕಾತಿ ವಿಷಯವನ್ನು ಪರಿಗಣಿಸುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಹೇಳಿರುವುದು ಆಶಾದಾಯಕ ಸಂಗತಿ. ಆದರೆ, ಇದು ಪರಿಗಣನೆಯ ಘೋಷವಾಕ್ಯ ಆಗಕೂಡದು. ‘ರಂಗಭೂಮಿ ಶಿಕ್ಷಣ ನೀತಿ’ ಜಾರಿಗೊಳಿಸಬೇಕು. ಅದರಿಂದ ಸಾಮಾಜಿಕ ಸ್ವಾಸ್ಥ್ಯವನ್ನು ಉಳಿಸಿ ಬೆಳೆಸಲು ಅನುಕೂಲ ಆಗಬಹುದು. ರಂಗ ಶಿಕ್ಷಣ, ವಿದ್ಯಾರ್ಥಿಗಳಲ್ಲಿ ಮೌಲ್ಯಗಳನ್ನು ಬಿತ್ತುವು. ದರ ಜೊತೆಗೆ ಅವರಲ್ಲಿ ಸೃಜನಶೀಲತೆಯ ಗುಣವನ್ನು ವೃದ್ಧಿಸಲು ಸಹಕಾರಿ. ಸಾಹಿತ್ಯ, ಕಲೆ, ಸಂಗೀತ, ನಟನೆ, ನೇಪಥ್ಯ, ಮಾತುಗಾರಿಕೆ - ಮುಂತಾದ ಲಲಿತಕಲೆಗಳ ಮೊತ್ತವು ರಂಗಭೂಮಿಯಲ್ಲಿದೆ. ಅದು ವಿದ್ಯಾರ್ಥಿಗಳಲ್ಲಿ ವೈಜ್ಞಾನಿಕತೆ ಮತ್ತು ವೈಚಾರಿಕತೆ ಬೆಳೆಸುತ್ತದೆ. ರಂಗ ಪ್ರಯೋಗಗಳಿಂದ ಅವರ ಮನೋರಂಗವು ಹೆಚ್ಚು ವಿಕಸನಗೊಳ್ಳುತ್ತದೆ. ಹಾಗಾಗಿ, ಶೀಘ್ರವಾಗಿ ರಂಗಶಿಕ್ಷಕರ ನೇಮಕಾತಿ ನಡೆಯಲಿ.

ಡಿ.ಎಸ್. ಚೌಗಲೆ, ಬೆಳಗಾವಿ

ಅತಿಥಿ ಶಿಕ್ಷಕರಿಗೂ ಇರಲಿ ರಜೆ ಸೌಲಭ್ಯ

ಸರ್ಕಾರಿ ಶಾಲೆಯ ಕಾಯಂ ಶಿಕ್ಷಕರಿಗೆ ವರ್ಷಕ್ಕೆ 15 ಸಾಂದರ್ಭಿಕ ರಜೆ ಮತ್ತು ಎರಡು ಪರಿಮಿತ ರಜೆ ಪಡೆಯುವ ಅವಕಾಶವಿದೆ. ಇತ್ತೀಚೆಗೆ ಶಿಕ್ಷಕಿಯರಿಗೆ ತಿಂಗಳಿಗೊಂದು ಋತುಚಕ್ರದ ರಜಾ ಸೌಲಭ್ಯ ಕಲ್ಪಿಸಲಾಗಿದೆ. ಇದು ಮಹಿಳಾ ಸಬಲೀಕರಣದತ್ತ ರಾಜ್ಯ ಸರ್ಕಾರ ಇಟ್ಟಿರುವ ದಿಟ್ಟಹೆಜ್ಜೆ. ಆದರೆ, ಸರ್ಕಾರಿ ಶಾಲೆಗಳಲ್ಲಿ ಕಡಿಮೆ ಸಂಬಳ ಪಡೆದು ಕಾಯಂ ಶಿಕ್ಷಕರಿಗೆ ಸರಿಸಮವಾಗಿ ಕೆಲಸ ಮಾಡುತ್ತಿರುವ ಅತಿಥಿ ಶಿಕ್ಷಕರಿಗೆ ಯಾವ ರಜಾ ಸೌಲಭ್ಯವೂ ಇಲ್ಲದಿರುವುದು ವಿಷಾದನೀಯ. ಅವರಿಗೂ ರಜೆಗಳ ಅವಶ್ಯಕತೆ ಇದೆ. ಮಾನವೀಯತೆ ದೃಷ್ಟಿಯಿಂದ ಅವರಿಗೂ ರಜಾ ಸೌಲಭ್ಯ ಒದಗಿಸುವುದು ಸರ್ಕಾರದ ಜವಾಬ್ದಾರಿ.

ಶಿವಕುಮಾರ ಬಂಡೋಳಿ, ಯಾದಗಿರಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.