ಕೊಹ್ಲಿಯ ನಿಷ್ಠೆ ಅನುಕರಣೀಯ

ಕೊನೆಗೂ ಈ ಸಲ ಕಪ್ ನಮ್ದು! 18 ವರ್ಷಗಳ ನಂತರ ಲಕ್ಷಾಂತರ ಅಭಿಮಾನಿಗಳ ಆಸೆ ಈಡೇರಿದೆ. ರೋಚಕ ಫೈನಲ್ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ತಂಡದ ವಿರುದ್ಧ ರಜತ್ ಪಾಟೀದಾರ್ ಬಳಗದ ಪ್ರದರ್ಶನ ಅಭಿಮಾನಿಗಳ ಮನ ತಣಿಸಿದ್ದು ಸುಳ್ಳಲ್ಲ. ವಾಸ್ತವವಾಗಿ ಯಾವುದೇ ಕ್ರೀಡೆಯಲ್ಲೂ; ವಿಸ್ತೃತವಾಗಿ ಹೇಳುವುದಾದರೂ ಬದುಕಿನ ಯಾವುದೇ ರಂಗದಲ್ಲೂ ಸೋಲುಗಳು ನೈಜ ಅರ್ಥದಲ್ಲಿ ಇರುವುದಿಲ್ಲ. ಇದರಲ್ಲಿ ನಾವು ಅವರನ್ನು ‘ಬಗ್ಗು ಬಡಿದಿದ್ದು’ ಏನೂ ಇಲ್ಲ. ಅವನು ಒಂದು ಎಸೆತವನ್ನು ಕ್ರೀಡಾಂಗಣದ ಆಚೆಗೆ ಬಾರಿಸಿದ್ದಿದ್ದರೆ ಕಪ್ ಅಲ್ಲಿರುತ್ತಿತ್ತು.

ಒಂದೆರಡು ರನ್ಗಳಲ್ಲಿ ನಾವೂ ಬಹಳಷ್ಟು ಬಾರಿ ಸೋತಿದ್ದೇವೆ. ಒಲಿಂಪಿಕ್ ಕೂಟದಲ್ಲೂ ಒಂದೆರಡು ಸೆಕೆಂಡ್ ಅಂತರದಲ್ಲಿ, ಒಂದೆರಡು ಮಿಲಿಮೀಟರ್ ಅಂತರದಲ್ಲಿ ಪದಕಗಳು ಕೈತಪ್ಪುತ್ತವೆ. ಆರ್ಸಿಬಿ ತಂಡದಲ್ಲಿ ಈ ಪಂದ್ಯದಲ್ಲಿ ಕಣಕ್ಕೆ ಇಳಿದ ಕನ್ನಡದ ಕಂದ ಮಯಂಕ್ ಅಗರವಾಲ್ ಅವರೊಬ್ಬರೇ. ವಿರಾಟ್ ಕೊಹ್ಲಿಯ ನಿಷ್ಠೆ ಅನುಕರಣೀಯ. ಇದು ಅವರ ಕಪ್.

-ಎಸ್.ಕೆ.ಕುಮಾರ್, ಬೇಲೂರು

ಪ್ಲಾಸ್ಟಿಕ್: ನಿರ್ವಹಣೆಗೆ ಜಾಣತನ ತೋರಬೇಕಿದೆ

ಪ್ಲಾಸ್ಟಿಕ್ ಎಂಬ ಭಸ್ಮಾಸುರನ ರೌದ್ರಾವತಾರ ಕುರಿತ ವರದಿ ಔಚಿತ್ಯಪೂರ್ಣವಾಗಿದೆ (ಆಳ- ಅಗಲ, ಜೂನ್ 4). ನಾವು ಬೆಳಿಗ್ಗೆ ಎದ್ದಾಗ ಹಿಡಿಯುವ ಹಲ್ಲು ಉಜ್ಜುವ ಬ್ರಷ್ನಿಂದ ಹಿಡಿದು ರಾತ್ರಿ ಮಲಗುವಾಗ ದೀಪ ಆರಿಸಲು ಉಪಯೋಗಿಸುವ ಸ್ವಿಚ್ವರೆಗೆ ಎಲ್ಲವೂ ಪ್ಲಾಸ್ಟಿಕ್ಮಯ. ಪ್ಲಾಸ್ಟಿಕ್ ಬಳಕೆಯನ್ನು ದಿಢೀರ್ ನಿಲ್ಲಿಸಲು ಸಾಧ್ಯವಿಲ್ಲದಿದ್ದರೂ ಅದರ ಬಳಕೆಯನ್ನು ಕ್ರಮೇಣ ಕಡಿಮೆ ಮಾಡಬಹುದು, ಹೆಚ್ಚು ಜಾಣತನದಿಂದ ಅದರ ನಿರ್ವಹಣೆ ಮಾಡಬಹುದು.

ನಗರವೊಂದರ ಪೊಲೀಸರು ನಿಷೇಧಗೊಂಡ ಅರ್ಧ ತಲೆಯ ಹೆಲ್ಮೆಟ್ಗಳನ್ನು ದ್ವಿಚಕ್ರ ವಾಹನ ಸವಾರರಿಂದ ವಶಪಡಿಸಿಕೊಂಡು ಅವುಗಳನ್ನು ಬುಲ್ಡೋಜರ್ ಸಹಾಯದಿಂದ ನಾಶಪಡಿಸಿದರು ಎಂಬ ಸುದ್ದಿಯು ಎರಡು
ತಿಂಗಳ ಹಿಂದೆ ವರದಿಯಾಗಿತ್ತು. ಇದರ ಬದಲು ಅವಶ್ಯಕತೆ ಇರುವ ರಸ್ತೆ ಕಾಮಗಾರಿ ಕೆಲಸಗಾರರು ಹಾಗೂ ಕಟ್ಟಡ ನಿರ್ಮಾಣ ಕೆಲಸದಲ್ಲಿ ತೊಡಗಿರುವವರಿಗೆ ವಿತರಿಸಿದ್ದರೆ ಈ ಕಸದ ರಾಶಿಯನ್ನು ತಪ್ಪಿಸಬಹುದಿತ್ತು. ಎಲ್ಲಾ ಸ್ತರದ ಜನರು ಈ ದಿಸೆಯಲ್ಲಿ ಕೈಜೋಡಿಸಿದರೆ ಸ್ವಲ್ಪಮಟ್ಟಿನ ಸಕಾರಾತ್ಮಕ ಬದಲಾವಣೆ ಸಾಧ್ಯ.

-ಆಶಾ ಅಪ್ರಮೇಯ, ದಾವಣಗೆರೆ

ಪಶ್ಚಿಮಘಟ್ಟ: ಮತ್ತೆ ಅಧ್ಯಯನದ ಕಸರತ್ತು...

ಪಶ್ಚಿಮಘಟ್ಟಗಳ ಉಳಿವಿಗಾಗಿ, ನಮ್ಮ ನಾಳೆಗಳಿಗಾಗಿ, ಭವಿಷ್ಯದ ಪೀಳಿಗೆಗಾಗಿ ಜನಸಾಮಾನ್ಯರೂ ಹೋರಾಟಕ್ಕೆ ಇಳಿಯಬೇಕಾಗಿದೆ. ಎಲ್ಲೆಲ್ಲಿ ಭೂಕುಸಿತವಾಗುತ್ತಿದೆಯೋ ಅಲ್ಲಿಯ ಧಾರಣ ಸಾಮರ್ಥ್ಯದ ಬಗ್ಗೆ ಅಧ್ಯಯನ ನಡೆಸುವ ಬಗ್ಗೆ ಅರಣ್ಯ ಸಚಿವರು ಹೇಳಿಕೆ ನೀಡಿದ್ದಾರೆ. ಈ ಪ್ರದೇಶದ ಧಾರಣ ಸಾಮರ್ಥ್ಯವನ್ನು ಅರಿಯುವ ಉದ್ದೇಶ ಒಳ್ಳೆಯದೇ. ಆದರೆ, ಅದಕ್ಕಾಗಿ ಮತ್ತೆ ಸಮಿತಿ ರಚಿಸುವುದು ಬೇಡ.

ಪಶ್ಚಿಮಘಟ್ಟಗಳ ಸಂರಕ್ಷಣೆಗೆ ಸಂಬಂಧಿಸಿದಂತೆ ಮಾಧವ ಗಾಡ್ಗೀಳ್ ವರದಿ, ಕಸ್ತೂರಿ ರಂಗನ್ ವರದಿ, ಬಿಜೆಪಿ ನೇತೃತ್ವದ ಸರ್ಕಾರ ಇದ್ದಾಗ ರಚಿಸಿದ್ದ ಸಮಿತಿಯೊಂದರ ವರದಿ... ಇವೆಲ್ಲ ದೂಳು ಹಿಡಿಯುತ್ತಾ ಎಲ್ಲಿ ಕುಳಿತಿವೆಯೋ? ಆ ವರದಿಗಳ ಮೇಲೆ ಒಮ್ಮೆ ಕಣ್ಣಾಡಿಸಿ ನೋಡಬಹುದಿತ್ತು.

ಈಗ ಎಲ್ಲೆಲ್ಲಿ ಭೂಕುಸಿತವಾಗುತ್ತಿದೆಯೋ ಆ ಪ್ರದೇಶಕ್ಕೆ ಸನಿಹದಲ್ಲಿರುವ ಊರಿನ ಜನರಿಂದ ಅಭಿಪ್ರಾಯ ಸಂಗ್ರಹಿಸಿದರೆ ಹೆಚ್ಚು ವಸ್ತುನಿಷ್ಠವಾದ ಸಂಗತಿ ಗೊತ್ತಾಗುತ್ತದೆ. ಪಶ್ಚಿಮ ಘಟ್ಟದ ವ್ಯಾಪ್ತಿಯಲ್ಲಿ ಯಾವುದೇ
ಬೃಹತ್ ಯೋಜನೆಯನ್ನು ಕೈಗೊಳ್ಳದಿರಲು ನಿರ್ಧಾರ ಮಾಡಿದರೆ ಪರಿಸರ ಮತ್ತು ಜೀವಜಾಲದ ಉಳಿವಿಗಾಗಿ ಅದಕ್ಕಿಂತ ಉತ್ತಮ ನಿರ್ಧಾರ ಇನ್ನೊಂದು ಇರಲಾರದು! ಈ ದಿಸೆಯಲ್ಲಿ ರಾಜ್ಯ ಸರ್ಕಾರವು ಆಲೋಚನೆ ಮಾಡುವುದು ಉತ್ತಮ.

-ವಿಶಾಲಾಕ್ಷಿ ಶರ್ಮಾ, ಬೆಂಗಳೂರು

ಮಹನೀಯರ ಜಯಂತಿ: ಜಾತಿಗಳಿಗೆ ಸೀಮಿತ ಬೇಡ

ರೇವಣ್ಣ ಎಂ.ಜಿ. ಅವರ ‘ಎದೆಯ ಹಣತೆ’ಯಲ್ಲಿ ಮೂಡಲಿ ಸಾಮರಸ್ಯ' ಲೇಖನ (ಸಂಗತ, ಜೂನ್ 4) ತುಂಬಾ ವಸ್ತುನಿಷ್ಠವಾಗಿದೆ. ಸರ್ಕಾರದಿಂದ ಆಚರಿಸಲ್ಪಡುವ ಬಸವ ಜಯಂತಿ, ವಾಲ್ಮೀಕಿ ಜಯಂತಿ, ವಿಶ್ವಮಾನವ (ಕುವೆಂಪು) ಜಯಂತಿ, ಕನಕದಾಸ ಜಯಂತಿ, ಅಂಬೇಡ್ಕರ್ ಜಯಂತಿಯಂತಹ ಜಯಂತಿಗಳ ಸಂದರ್ಭದಲ್ಲಿ ಜಿಲ್ಲಾಡಳಿತ, ತಾಲ್ಲೂಕು ಆಡಳಿತಗಳು ಕರೆಯುವ ಪೂರ್ವಭಾವಿ ಸಭೆಗಳಿಗೆ ಆಯಾ ಮಹನೀಯರಿಗೆ ಸಂಬಂಧಿಸಿದ ಜಾತಿ ಸಂಘಟನೆಗಳ ಪ್ರತಿನಿಧಿಗಳನ್ನು ಮಾತ್ರ ಆಹ್ವಾನಿಸುವ ಪರಿಪಾಟ ಬೆಳೆದುಬಂದಿದೆ.

ಹಾಗಾದರೆ ಮೇಲೆ ಹೇಳಿದ ಎಲ್ಲಾ ಮಹನೀಯರು ಅವರವರ ಜಾತಿಗೆ ಮಾತ್ರ ಸೀಮಿತರಾದವರೇ?! ಅವರೆಲ್ಲರೂ ಇಡೀ ಮನುಕುಲದ ಒಳಿತಿಗಾಗಿ ದುಡಿದವರು. ಅವರ ಸಂದೇಶಗಳು ಮನುಜಮತದ ಏಳಿಗೆಯನ್ನು ಬಯಸುವಂಥವು ಎಂಬ ಸತ್ಯವನ್ನು ನಾವೇಕೆ ಮರೆಮಾಚುತ್ತಿದ್ದೇವೆ?

ಉದಾತ್ತ ವ್ಯಕ್ತಿಗಳ ಜಯಂತಿ ಆಚರಣೆ ಸಂದರ್ಭದಲ್ಲಿ ಜಾತಿ ಭೇದವಿಲ್ಲದೆ ಎಲ್ಲರನ್ನೂ ತೊಡಗಿಸಿಕೊಳ್ಳಬೇಕೆಂದು ಜಿಲ್ಲಾಡಳಿತ, ತಾಲ್ಲೂಕು ಆಡಳಿತಗಳಿಗೆ ಸರ್ಕಾರ ಕಟ್ಟುನಿಟ್ಟಿನ ಸೂಚನೆ ನೀಡಬೇಕಿದೆ.

-ಚಾವಲ್ಮನೆ ಸುರೇಶ್ ನಾಯಕ್, ಹಾಲ್ಮುತ್ತೂರು, ಕೊಪ್ಪ

ನುಡಿಯ ಅಸ್ಮಿತೆ ಪ್ರಶ್ನೆ

ಮರ್ಯಾದೆಗೆ ಕುಂದಲ್ಲ

ಕ್ಷಮೆ ಕೇಳುವುದು

ಬದಲಿಗೆ ಹೆಚ್ಚುವುದು ಘನತೆ!

ನೀವು ಆಡಿದ ಮಾತೇನು ಚಿಕ್ಕದೆ!

ಕನ್ನಡ ನುಡಿಯ ಅಸ್ಮಿತೆಗೆ

ಕುಂದುಂಟು ಮಾಡುವ

ಕನ್ನಡಿಗರನ್ನು ಕೆಣಕುವ

ಅನರ್ಥಕಾರಿ ಮಾತದು!

ಹೈಕೋರ್ಟ್ ಆಡಿದ ಮಾತು

ಅತ್ಯಂತ ಅರ್ಥಪೂರ್ಣ ಸಕಾಲಿಕ!

ಚಿಂತಿಸಿ ತೀರ್ಮಾನಿಸಿ ಕಮಲ್ ಅವರೇ...

-ಸಿ.ಪಿ.ಸಿದ್ಧಾಶ್ರಮ, ಮೈಸೂರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.