ಗುರುವಾರ , ಜೂನ್ 24, 2021
21 °C

ಪ್ರೈಮರಿ ಶಾಲೆ ಮಹಿಳೆಗೆ ಕಡ್ಡಾಯದ ಶಿಕ್ಷೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಶಿಕ್ಷಕರ ವರ್ಗಾವಣೆ ಕೌನ್ಸೆಲಿಂಗ್ ಪದೇ ಪದೇ ಮುಂದೆ ಹೋಗುತ್ತಿರುವುದಕ್ಕೆ ಕಡ್ಡಾಯ ವರ್ಗಾವಣೆ ಎಂಬ ಅನುಚಿತ, ಅವೈಜ್ಞಾನಿಕ ವಿಧಾನವನ್ನು ಸೇರಿಸಿರುವುದೇ ಕಾರಣವಾಗಿದೆ. ಈ ಕಡ್ಡಾಯದ ಪ್ರಕಾರ, ಹತ್ತು ವರ್ಷಗಳಿಗೂ ಅಧಿಕ ಕಾಲ ಬೆಂಗಳೂರು ನಗರದಲ್ಲಿ ಶಿಕ್ಷಕರಾಗಿ ಕೆಲಸ ಮಾಡಿದವರಲ್ಲಿ ಕೆಲವರನ್ನು ಸಿ ದರ್ಜೆಯ ಗ್ರಾಮ, ಪಟ್ಟಣಗಳಿಗೆ ವರ್ಗ ಮಾಡಲಾಗುತ್ತದೆ. ಹೀಗೆ ಪಟ್ಟಿ ಮಾಡಿದವರಲ್ಲಿ ಐವತ್ತು ವಯಸ್ಸು ಮೀರಿದವರೇ ಹೆಚ್ಚಾಗಿದ್ದಾರೆ. ಅದರಲ್ಲೂ ಬಹುಪಾಲು ಮಹಿಳೆಯರು.

ಒಂದನೇ ತರಗತಿಯಿಂದಲೇ ಕೆಲವು ಸರ್ಕಾರಿ ಶಾಲೆಗಳಲ್ಲಿ ಇಂಗ್ಲಿಷ್ ಮಾಧ್ಯಮ ಶುರು ಮಾಡಿರುವಾಗ ಅಲ್ಲಿ ಅನುಭವಿ ಶಿಕ್ಷಕರು ಬೇಕು. ಸಾಮಾನ್ಯವಾಗಿ ಹೆಚ್ಚು ಸೇವೆ ಮಾಡಿದ ಸರ್ಕಾರಿ ನೌಕರರಿಗೆ ಮತ್ತಷ್ಟು ಹೊಣೆ ನೀಡಿ ಸೌಲಭ್ಯಗಳನ್ನು ಕಲ್ಪಿಸಲಾಗುತ್ತದೆ. ಸರ್ಕಾರದ ಇತರ ಅನೇಕ ವಿಭಾಗಗಳಲ್ಲಿ ಹಾಗೆ ಮಾಡಲಾಗುತ್ತದೆ. ಆದರೆ ಕಡ್ಡಾಯ ವರ್ಗಾವಣೆ ಇದಕ್ಕೆ ವ್ಯತಿರಿಕ್ತವಾಗಿದೆ. ಕೆಲವು ಅಧಿಕಾರಿಗಳು ಒಂದು ಪ್ರಯೋಗವಾಗಿ ಇದನ್ನು ಮಾಡೋಣ ಎಂಬ ನಿಲುವಿಗೆ ಬಂದು, ಈ ಕಡ್ಡಾಯ ಜಾರಿಗೆ ಬಂದಿದೆ. ಪ್ರಯೋಗ ಪಶುವಾಗುವುದು ಎಷ್ಟಿದ್ದರೂ ಪ್ರಾಥಮಿಕ ಶಾಲೆಯ ಶಿಕ್ಷಕರೇ ಅಲ್ಲವೇ?

–ಗುಡಿಹಳ್ಳಿ ನಾಗರಾಜ, ಬೆಂಗಳೂರು

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು