ಬುಧವಾರ, ಏಪ್ರಿಲ್ 21, 2021
30 °C

ವಾಚಕರ ವಾಣಿ: ಅಭಿವೃದ್ಧಿ ನೀತಿ ಸ್ಥಾನಪಲ್ಲಟ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಒಂದು ಕಾಲದಲ್ಲಿ ರಾಷ್ಟ್ರೀಕರಣ ಎಂಬುದು ಅಭಿವೃದ್ಧಿಯ ನೀತಿಯಾಗಿತ್ತು. ಈಗ ಖಾಸಗೀಕರಣ ಅಭಿವೃದ್ಧಿಯ ನೀತಿ ಎನಿಸುತ್ತಿದೆ. ಕಾಲ ಕಳೆದಂತೆ ಸರ್ಕಾರದ ನೀತಿಗಳು ಸ್ಥಾನಪಲ್ಲಟ ಆಗುತ್ತಿವೆ. ಎರಡು ರಾಷ್ಟ್ರೀಕೃತ ಬ್ಯಾಂಕುಗಳ ಖಾಸಗೀಕರಣ ಮಾಡುವ ಸರ್ಕಾರದ ಉದ್ದೇಶ ಈ ಮಾತಿಗೆ ನಿದರ್ಶನವಾಗಿದೆ.

ಖಾಸಗೀಕರಣದಿಂದಾಗಿ ಸಾರ್ವಜನಿಕ ವಲಯದ ಬ್ಯಾಂಕುಗಳು ಮತ್ತೆ ಶ್ರೀಮಂತರ ಸೊತ್ತಾಗಲಿವೆಯೇ ಎಂಬ ಅನುಮಾನ ಸಹಜವಾಗಿ ಉಂಟಾಗುತ್ತದೆ. ಹಾಗಾಗಿ ರಾಷ್ಟ್ರೀಕೃತ ಬ್ಯಾಂಕುಗಳ ಅಧಿಕಾರಿಗಳ ಒಕ್ಕೂಟ ದೇಶದಾದ್ಯಂತ ಇದೇ 15 ಮತ್ತು 16ರಂದು ಎರಡು ದಿನಗಳ ಮುಷ್ಕರಕ್ಕೆ ಕರೆ ಕೊಟ್ಟಿದೆ. ಇದನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಬೇಕು.

–ಡಾ. ಟಿ.ಪಿ.ಗಿರಡ್ಡಿ, ಜಮಖಂಡಿ

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು