ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ಲಾಸ್ಟಿಕ್‌ನಿಂದ ರಕ್ಷಿಸಿಕೊಳ್ಳೋಣ...

Last Updated 11 ನವೆಂಬರ್ 2018, 20:00 IST
ಅಕ್ಷರ ಗಾತ್ರ

ಆರೋಗ್ಯಕ್ಕೆ ಹಾನಿಕಾರಕ ಎಂದು ತಿಳಿದಿದ್ದರೂ ನಾವು ಪ್ಲಾಸ್ಟಿಕ್ ಬಳಕೆಯನ್ನು ಕಡಿಮೆ ಮಾಡುತ್ತಿಲ್ಲ ಎಂಬುದು ಬೇಸರದ ವಿಚಾರ. ನೋಡಲು ಸುಂದರವಾಗಿ ಕಾಣುತ್ತವೆ ಎನ್ನುವ ಕಾರಣದಿಂದಲೋ ಅಥವಾ ಕಡಿಮೆ ಬೆಲೆಗೆ ಸಿಗುತ್ತವೆ ಎನ್ನುವ ಕಾರಣಕ್ಕೋ, ಒಟ್ಟಿನಲ್ಲಿ ಪ್ಲಾಸ್ಟಿಕ್‌ ನಮ್ಮ ಜೀವನದ ಅವಿಭಾಜ್ಯ ಅಂಗವಾಗಿದೆ. ನಾವು ಪ್ಲಾಸ್ಟಿಕ್‌ ಅನ್ನು ತಬ್ಬಿಕೊಂಡಿದ್ದೇವೋ ಅಥವಾ ಪ್ಲಾಸ್ಟಿಕ್ ನಮ್ಮನ್ನು ತಬ್ಬಿಕೊಂಡಿದೆಯೋ ತಿಳಿಯದಾಗಿದೆ.

ಹಳ್ಳಿಗಳಲ್ಲಿ ಮಹಿಳೆಯರು ಒಲೆಯನ್ನು ಹೊತ್ತಿಸಲು ಸಹ ಪ್ಲಾಸ್ಟಿಕ್ ಕವರ್‌ಗಳನ್ನು ಬಳಸುತ್ತಿರುವುದು ಅತ್ಯಂತ ಅಪಾಯಕಾರಿ ಅಭ್ಯಾಸವಾಗುತ್ತಿದೆ. ಪ್ಲಾಸ್ಟಿಕ್ ಚೀಲಗಳನ್ನು ಒಲೆಗೆ ಹಾಕಿದರೆ ಬೇಗ ಬೆಂಕಿ ಹತ್ತುವುದು ಎನ್ನುವ ಭಾವನೆ ಈ ಜನರಲ್ಲಿ ದಟ್ಟವಾಗುತ್ತಿದೆ. ಪ್ಲಾಸ್ಟಿಕ್‌ನ ಹಾನಿಯ ಬಗ್ಗೆ ತಿಳಿದ ಸುಶಿಕ್ಷಿತರೂ ಪ್ಲಾಸ್ಟಿಕ್ ಬಳಕೆ ಕಡಿಮೆ ಮಾಡಲು ಹಿಂದೇಟು ಹಾಕುತ್ತಿರುವಾಗ ಗ್ರಾಮೀಣ ಭಾಗದ ಅಶಿಕ್ಷಿತರ ಕಥೆ ಏನು? ಪ್ಲಾಸ್ಟಿಕ್‌ ಬಳಕೆಯ ಪರಿಣಾಮಗಳ ಬಗ್ಗೆ ಜಾಗೃತಿ ಮೂಡಿಸುವ ಕೆಲಸ ಇನ್ನಷ್ಟು ತೀವ್ರವಾಗಿ ನಡೆಯಬೇಕು. ಮಹಿಳೆಯರು ಅದನ್ನು ಬೇಗನೆ ಅರಿತುಕೊಂಡು ಇಡೀ ಕುಟುಂಬದ ಆರೋಗ್ಯ ರಕ್ಷಣೆಗೆ ಮುಂದಾಗಬೇಕು.

–ಮಾಲಾ ಶ್ರೀಧರ, ದಾಸನಾಳ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT