ಶುಕ್ರವಾರ, ಏಪ್ರಿಲ್ 16, 2021
29 °C

ಕಾಡಾನೆಯ ಹಸಿವು ನೀಗಿಸಿ, ಹಾವಳಿ ತಪ್ಪಿಸಿ

ವಾಚಕರ ವಾಣಿ Updated:

ಅಕ್ಷರ ಗಾತ್ರ : | |

ಜನವಸತಿ ಪ್ರದೇಶಕ್ಕೆ ಕಾಡಾನೆಗಳ ಲಗ್ಗೆಯನ್ನು ತಗ್ಗಿಸಲು ಸರ್ಕಾರ ಹಾಗೂ ಸಾರ್ವಜನಿಕರ ವತಿಯಿಂದ ಹಲವು ಯೋಜನೆಗಳು ಹಾಗೂ ಉಪಾಯಗಳು ಜಾರಿಯಲ್ಲಿವೆ. ಆದರೆ ಹಾವಳಿಯ ಮೂಲ ಸಮಸ್ಯೆ ಬಗೆಹರಿಸುವುದು ಅತಿ ಮುಖ್ಯ. ಹೌದು, ಅದು ‘ಹಸಿವು’. ಅಸಂಖ್ಯ ಆಹಾರ ಆಯ್ಕೆಗಳಿರುವ ಮಾನವನಿಗೇ ಒಂದು ಕ್ಷಣ ಹಸಿವು ತಡೆಯಲಾಗುವುದಿಲ್ಲ. ಅಂತಹುದರಲ್ಲಿ ಪ್ರಾಣಿಯ ಆಹಾರದ ಮೂಲವಾಗಿರುವ ಅರಣ್ಯವನ್ನೇ ಮಾನವ ತನ್ನ ವಿವಿಧ ಉದ್ದೇಶಗಳಿಗಾಗಿ ಅತಿಕ್ರಮಿಸಿರುವುದು ವಿಷಾದಕರ.

ಕಾಡಾನೆಗಳ ಬಳಕೆಯಲ್ಲಿರುವ ನೀರಿನ ಕೊಳ್ಳ ಹಾಗೂ ಅವು ವಿಶ್ರಮಿಸುವ ಜಾಗದ ಸುತ್ತಮುತ್ತ ಅವುಗಳಿಗೆ ಬೇಕಾದ ಮೇವು, ಹಣ್ಣು ಹಂಪಲುಗಳನ್ನು ಅರಣ್ಯ ಇಲಾಖೆಯು ಹೇರಳವಾಗಿ ಬೆಳೆಯುತ್ತಲಿದ್ದರೆ ಕಾಡಾನೆಗಳ ಹಸಿವೂ ನೀಗುತ್ತದೆ ಹಾಗೂ ಆಹಾರ ಹುಡುಕಿ ನಾಡಿನತ್ತ ಲಗ್ಗೆ ಇಡುವ ಗಜಪಡೆಯ ಸಮಸ್ಯೆಗೆ ಪರಿಹಾರವೂ ದೊರಕಿದಂತಾಗುತ್ತದೆ.

- ಪ್ರವೀಣ ಪೂಜೇರ, ಬೆಳಗಾವಿ

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.