ಶುಕ್ರವಾರ, ಸೆಪ್ಟೆಂಬರ್ 24, 2021
26 °C

ವಾಚಕರ ವಾಣಿ | ಮಹಾನ್‌ ನಾಯಕರ ಕೊಡುಗೆ ಪರಿಗಣಿಸಿ

ವಾಚಕರ ವಾಣಿ Updated:

ಅಕ್ಷರ ಗಾತ್ರ : | |

ಹಿರಿಯ ರಾಜಕೀಯ ಮುತ್ಸದ್ದಿಗಳಾಗಿದ್ದ ದಿವಂಗತ ಪಂಡಿತ್ ಜವಾಹರಲಾಲ್ ನೆಹರೂ, ಇಂದಿರಾ ಗಾಂಧಿ ಹಾಗೂ ಅಟಲ್‌ ಬಿಹಾರಿ ವಾಜಪೇಯಿ ಅವರ ಬಗ್ಗೆ ಕೆಲವರು ನಾಲಿಗೆ ಹರಿಬಿಡುತ್ತಿರುವುದು ತೀರಾ ಖಂಡನಾರ್ಹ. ದೇಶಕ್ಕೆ ಈ ಮಹಾನ್ ನಾಯಕರ ಕೊಡುಗೆ ಅಪಾರ. ಸುದೀರ್ಘಕಾಲ ದೇಶದ ಪ್ರಧಾನಿಯಾಗಿದ್ದ ನೆಹರೂ, ಭಾರತದ ಅರ್ಥ ವ್ಯವಸ್ಥೆಗೆ ಭದ್ರ ಬುನಾದಿ ಹಾಕಿದರು. ಇಂದಿರಾ ಗಾಂಧಿ ಅವರೂ ದೇಶದ ಚುಕ್ಕಾಣಿ ಹಿಡಿದು, ಸುಭದ್ರ ಆಡಳಿತ ನೀಡಿದರು. ಅವರ ಕೊಡುಗೆಯೂ ಕಡಿಮೆಯೇನಿಲ್ಲ.
 

ವಾಜಪೇಯಿ ತಮ್ಮ ಪಕ್ಷಕ್ಕೆ ಲೋಕಸಭೆಯಲ್ಲಿ ಸ್ಪಷ್ಟ ಬಹುಮತ ಇಲ್ಲದೇ ಹೋದರೂ, ಸಣ್ಣಪುಟ್ಟ ಪಕ್ಷಗಳ ಜೊತೆ ಮೈತ್ರಿ ಮಾಡಿಕೊಂಡು, ದೇಶಕ್ಕೆ ಉತ್ತಮ ಹಾಗೂ ಸುಭದ್ರ ಆಡಳಿತ ನೀಡಿದ್ದಾರೆ. ನೆಹರೂ ಮತ್ತು ಇಂದಿರಾ ನಾಮಾಂಕಿತ ಕೆಲವು ವಿಶ್ವವಿದ್ಯಾಲಯಗಳ ಹೆಸರುಗಳನ್ನು ಬದಲಾಯಿಸುವ ಹುನ್ನಾರ ಕೆಲವು ವರ್ಷಗಳಿಂದೀಚೆಗೆ ನಡೆಯುತ್ತಿದೆ. ಹೀಗೆ ಮಹಾನ್ ನಾಯಕರ ಹೆಸರನ್ನು ಬದಲಾಯಿಸುವುದು ಅವರಿಗೆ ನಾವು ತೋರುವ ಅಗೌರವವಾಗುತ್ತದೆ. ಸಾಮಾಜಿಕ ಜಾಲತಾಣಗಳಲ್ಲಿ ನೆಹರೂ ಅವರ ಬಗ್ಗೆ ಅತ್ಯಂತ ಅಸಹ್ಯಕರ ಚಿತ್ರಗಳನ್ನು ಪೋಸ್ಟ್ ಮಾಡಲಾಗುತ್ತಿದೆ. ವೈಯಕ್ತಿಕ ವಿಷಯಗಳನ್ನು ದೊಡ್ಡದು ಮಾಡಿ, ಅವರ ಸಾಧನೆಗಳನ್ನು ಮುಚ್ಚಿಹಾಕುವುದು ಸಹ ಅತ್ಯಂತ ಖಂಡನೀಯ. ಇಂತಹ ಕೆಟ್ಟ ಪ್ರವೃತ್ತಿಗಳು ನಿಲ್ಲಲಿ.

- ಕೆ.ವಿ.ವಾಸು, ಮೈಸೂರು

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು