ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅತಿಥಿ ಉಪನ್ಯಾಸಕರಿಗೆ ಸಿಕ್ಕಿದ್ದು ಕಹಿ!

Last Updated 16 ಜನವರಿ 2022, 15:47 IST
ಅಕ್ಷರ ಗಾತ್ರ

ರಾಜ್ಯದ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಸುಮಾರು 14,500 ಮಂದಿ ಅತಿಥಿ ಉಪನ್ಯಾಸಕರಾಗಿ ಸುಮಾರು 15-20 ವರ್ಷಗಳಿಂದ ಅತೀ ಕಡಿಮೆ ಪಗಾರಕ್ಕೆ ಪ್ರಾಮಾಣಿಕವಾಗಿ ಸೇವೆ ಸಲ್ಲಿಸುತ್ತಾ ಬಂದಿದ್ದಾರೆ. ಇದೀಗ ಉನ್ನತ ಶಿಕ್ಷಣ ಇಲಾಖೆ, ಹಿರಿಯ ಅಧಿಕಾರಿಗಳು ಮತ್ತು ಇಲಾಖೆ ಆಯುಕ್ತರನ್ನೊಳಗೊಂಡ ಸಮಿತಿಯ ಅನ್ವಯ ಉನ್ನತ ಶಿಕ್ಷಣ ಸಚಿವ ಡಾ. ಅಶ್ವತ್ಥ ನಾರಾಯಣ ಅವರು ಅತಿಥಿ ಉಪನ್ಯಾಸಕರು ನಿರ್ವಹಿಸುತ್ತಿದ್ದ 8 ಗಂಟೆಗಳ ಕಾರ್ಯಭಾರವನ್ನು 15 ಗಂಟೆಗಳಿಗೇರಿಸಿ ಅರ್ಹತೆಗನುಸಾರ ವೇತನ ಹೆಚ್ಚಿಸಿ ಆದೇಶಿಸಿದ್ದಾರೆ. ಆದರೆ ಒಬ್ಬ ಅತಿಥಿ ಉಪನ್ಯಾಸಕನ 8 ಗಂಟೆಗಳ ಕಾರ್ಯಭಾರವನ್ನು ಕಿತ್ತು 15 ಗಂಟೆಗಳಿಗೆ ಹೆಚ್ಚಿಸಿದ್ದರಿಂದ ಸುಮಾರು 7,500 ಅತಿಥಿ ಉಪನ್ಯಾಸಕರು ಕೆಲಸ ಕಳೆದುಕೊಂಡು ಬೀದಿಗೆ ನಿಲ್ಲುವಂತೆ ಮಾಡಲಾಗಿದೆ.

ಸಂಕ್ರಾಂತಿಗೆ ಸಿಹಿ ಕೊಡುತ್ತೇವೆ ಎಂದು ಹೇಳಿ ಇವರಿಗೆ ಮತ್ತು ಇವರನ್ನೇ ನೆಚ್ಚಿಕೊಂಡಿರುವ ಕುಟುಂಬಗಳಿಗೆ ಕಹಿ ಕೊಟ್ಟಂತಾಗಿದೆ. ಸರ್ಕಾರ ದಯಮಾಡಿ ಈ ಆದೇಶವನ್ನು ಪುನರ್‌ಪರಿಶೀಲಿಸಿ, 14,500 ಅತಿಥಿ ಉಪನ್ಯಾಸಕರಿಗೆ ಈಗಿರುವ ಕಾರ್ಯಭಾರಕ್ಕೆ ವೇತನ ನಿಗದಿಪಡಿಸಬೇಕು. ಅತೀವ ನೋವು ಮತ್ತು ಉದ್ಯೋಗ ಅಭದ್ರತೆಯ ಆತಂಕದಲ್ಲಿರುವ ಅತಿಥಿ ಉಪನ್ಯಾಸಕರ ನೆರವಿಗೆ ಬರಬೇಕು.

–ಮಧುಕುಮಾರ ಬಳ್ಳೇಕೆರೆ,ಹೊಸದುರ್ಗ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT