ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆರಗುಗೊಳಿಸಿದ ಸಂಗತಿ

Last Updated 4 ಆಗಸ್ಟ್ 2021, 15:12 IST
ಅಕ್ಷರ ಗಾತ್ರ

ಆನುವಂಶೀಯ ಕಾಯಿಲೆಯಿಂದ ಬಳಲುತ್ತಿದ್ದ ಒಂದು ವರ್ಷದ ಹೆಣ್ಣುಮಗುವಿನ ಚಿಕಿತ್ಸೆಗೆ ₹ 16 ಕೋಟಿ ಮೊತ್ತದ ಇಂಜೆಕ್ಷನ್ ನೀಡಿದರೂ ಮಗು ಮಾತ್ರ ಬದುಕುಳಿಯದ ಸುದ್ದಿ (ಪ್ರ.ವಾ., ಆ. 3) ಓದಿ ಕರುಳು ಹಿಚುಕಿದಂತಾಯಿತು. ಸಾಮಾಜಿಕ ಮಾಧ್ಯಮಗಳ ಮೂಲಕ ಸಹಾಯದ ಮಹಾಪೂರವೇ ಹರಿದು ಬಂದಿದ್ದರೂ ಕಷ್ಟಕ್ಕೆ ಮಿಡಿದವರ ನಿರೀಕ್ಷೆ ಹುಸಿಯಾದಂತಾಯಿತು.

ಇಲ್ಲಿ ಬೆರಗು ಮೂಡಿಸುವ ವಿಚಾರವೆಂದರೆ, ₹ 16 ಕೋಟಿ ಬೆಲೆಯ ಇಂಜೆಕ್ಷನ್ ಇರುವುದು ಸಾಧ್ಯವೇ ಎಂಬುದು. ಅಲ್ಲದೆ ಅಷ್ಟೊಂದು ದುಬಾರಿ ಬೆಲೆಯ ಇಂಜೆಕ್ಷನ್ ನೀಡಿದರೂ ಮಗು ಬದುಕುಳಿಯದಿರುವುದು ದುರಂತವೇ ಸರಿ. ಇದರ ಹೊಣೆಯನ್ನು ಯಾರ ಮೇಲೂ ಹೊರಿಸುವಂತಿಲ್ಲ. ನಿಸರ್ಗಶಕ್ತಿಯನ್ನು ಮೀರುವ ಶಕ್ತಿ ಯಾರಿಗೂ ಇಲ್ಲ ಎಂಬುದು ಮತ್ತೆ ಮತ್ತೆ ಸಾಬೀತಾಗುತ್ತಲೇ ಇರುತ್ತದೆ, ಅಷ್ಟೇ.

-ಎಸ್.ಎಸ್ ಭಾವಿಕಟ್ಟಿ ರೇವೂರ,ಕಲಬುರ್ಗಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT