ಮಂಗಳವಾರ, 14 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯೋಜನೆ ಬದಲಿಸಿ

Last Updated 24 ಜುಲೈ 2018, 19:30 IST
ಅಕ್ಷರ ಗಾತ್ರ

ಚಾಮರಾಜನಗರ ಜಿಲ್ಲೆಯ ಬಂಡೀಪುರ ವನ್ಯಜೀವಿ ಅಭಯಾರಣ್ಯದ ಮೂಲಕವೇ ಮೈಸೂರು- ಊಟಿ ಸಂಪರ್ಕಿಸುವ ರಾಷ್ಟ್ರೀಯ ಹೆದ್ದಾರಿ ಹಾಗೂ ಮೈಸೂರು- ಕೇರಳದ ಸುಲ್ತಾನಬತ್ತೇರಿ ಸಂಪರ್ಕಿಸುವ ರಾಷ್ಟ್ರೀಯ ಹೆದ್ದಾರಿಗಳು ಹಾದುಹೋಗಿವೆ. ಇವೆರಡೂ ರಸ್ತೆಗಳಲ್ಲಿ ರಾತ್ರಿ ವೇಳೆಯಲ್ಲಿ ವಾಹನ ಸಂಚಾರಕ್ಕೆ ನಿರ್ಬಂಧವಿದ್ದರೂಉಳಿದ ಅವಧಿಯಲ್ಲಿ ವನ್ಯಜೀವಿಗಳು ರಸ್ತೆ ದಾಟಲು ಮುಂದಾದರೆ ಅವುಗಳ ಪ್ರಾಣಕ್ಕೇ ಸಂಚಕಾರವಾಗುತ್ತಿದೆ.

ವನ್ಯಜೀವಿಗಳಿಗೆ ಆಗುತ್ತಿರುವ ತೊಂದರೆ ತಪ್ಪಿಸಲು ಕೇಂದ್ರ ಭೂಸಾರಿಗೆ ಸಚಿವ ನಿತಿನ್ ಗಡ್ಕರಿ ಅವರು ಅರಣ್ಯ ಪ್ರದೇಶದಲ್ಲಿರುವ 5 ಕಿ.ಮೀ. ಉದ್ದದ ರಸ್ತೆ ಜಾಗದಲ್ಲಿ ಮೇಲ್ಸೇತುವೆ ನಿರ್ಮಿಸುವ ಪ್ರಸ್ತಾವ ಮುಂದಿಟ್ಟಿದ್ದಾರೆ. ಅವರ ಕಾಳಜಿಯು ಶ್ಲಾಘನೀಯ.

ಆದರೆ ಮೇಲ್ಸೇತುವೆ ನಿರ್ಮಿಸುವ ಬದಲು, ಈಗಿರುವರಸ್ತೆಗಳ ಎರಡೂ ಬದಿಗೆ 10 ಅಡಿ ಎತ್ತರದ ಉಕ್ಕಿನ ಬೇಲಿ ನಿರ್ಮಿಸಿ, ರಸ್ತೆಯಲ್ಲಿ 1 ಕಿ.ಮೀ.ಗೆ ಒಂದರಂತೆ ಸುಮಾರುನೂರಡಿ ಉದ್ದದ ಮೇಲ್ಸೇತುವೆ ನಿರ್ಮಿಸುವುದು ಸೂಕ್ತ
ಎನಿಸುತ್ತದೆ. ಇದರಿಂದ ವನ್ಯಪ್ರಾಣಿಗಳು ರಸ್ತೆ ಹತ್ತದೆ ಮೇಲ್ಸೇತುವೆಯ ಅಡಿಯಿಂದ ನಿರಾತಂಕವಾಗಿ ಓಡಾಡುವಂತೆ ಮಾಡಬಹುದು. ಜೊತೆಗೆ ರಾತ್ರಿ ವೇಳೆಯಲ್ಲೂ ವಾಹನ ಓಡಾಟಕ್ಕೆ ಅನುಮತಿ ಕೊಡಬಹುದು.

ವನ್ಯಜೀವಿ ಸಂರಕ್ಷಣೆಗಾಗಿ ದುಡಿಯುವ ಸಂಘಟನೆಗಳು, ತಜ್ಞರು ಈ ಬಗ್ಗೆ ಸಲಹೆ ನೀಡುವುದು ಒಳಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT