ದ್ವೇಷದ ರಾಜಕಾರಣ

ಸೋಮವಾರ, ಮೇ 27, 2019
24 °C

ದ್ವೇಷದ ರಾಜಕಾರಣ

Published:
Updated:

ನಮ್ಮ ಸಂವಿಧಾನವು ಪ್ರಪಂಚಕ್ಕೇ ಮಾದರಿಯಾಗಿದೆ. ಆದರೆ, ದೇಶದ ರಾಜಕೀಯ ಮಾತ್ರ ಇದಕ್ಕೆ ವ್ಯತಿರಿಕ್ತವಾಗಿದ್ದು ತೀರಾ ಕೀಳು ಮಟ್ಟದಲ್ಲಿದೆ. ಇಂದು ದ್ವೇಷ ಮತ್ತು ಸೇಡಿನ ರಾಜಕಾರಣ ವಿಜೃಂಭಿಸುತ್ತಿರುವುದು ಅತ್ಯಂತ ಶೋಚನೀಯ ಮತ್ತು ನಾಚಿಕೆಗೇಡಿನ ಸಂಗತಿ.

ಅದರಲ್ಲೂ ವ್ಯಕ್ತಿಗತ ದ್ವೇಷ, ಟೀಕೆ, ಆರೋಪ– ಪ್ರತ್ಯಾರೋಪಗಳ ರಾಜಕಾರಣ ಮಿತಿ ಮೀರಿದೆ. ಎಲ್ಲರ ಮನೆಯ ದೋಸೆಯೂ ತೂತು ಎಂಬಂತೆ, ಯಾವ ಪಕ್ಷವೂ ಇದರಿಂದ ಹೊರತಾಗಿಲ್ಲ. 

ರಾಜಕೀಯ ಪಕ್ಷಗಳು ರಾಷ್ಟ್ರದ ಪ್ರಗತಿ ಹಾಗೂ ಜನಕಲ್ಯಾಣದ ಬಗ್ಗೆ ಮಾತನಾಡದೆ, ಸತತ ಟೀಕೆಯಲ್ಲೇ ನಿರತವಾಗಿವೆ. ಇಂಥ ಕಲುಷಿತ ರಾಜಕೀಯದಿಂದ ನಮ್ಮ ದೇಶವನ್ನು ದೇವರೇ ಕಾಪಾಡಬೇಕು.
-ಆರ್‌.ಎಸ್. ಚಾಪಗಾವಿ, ಬೆಳಗಾವಿ

ಬರಹ ಇಷ್ಟವಾಯಿತೆ?

 • 3

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !