ನೀರಿಳಿಯದ ಗಂಟಲಲ್ಲಿ...

ಶುಕ್ರವಾರ, ಜೂಲೈ 19, 2019
26 °C

ನೀರಿಳಿಯದ ಗಂಟಲಲ್ಲಿ...

Published:
Updated:

ಹೊಸದಾಗಿ ಖಾಸಗಿ ಶಾಲೆಗಳನ್ನು ತೆರೆಯಲು ಅನುಮತಿ ಕೋರಿ ಅರ್ಜಿ ಸಲ್ಲಿಸುವವರ ಸಂಖ್ಯೆ ಕಡಿಮೆಯಾಗಿದೆ ಎಂದು ವರದಿಯಾಗಿದೆ. ‘ಸರ್ಕಾರಿ ಶಾಲೆಯಲ್ಲಿ ಗುಣಮಟ್ಟದ ಶಿಕ್ಷಣ ನೀಡಲು ಕೈಗೊಂಡ ಕ್ರಮಗಳು ಮತ್ತು ಇಂಗ್ಲಿಷ್ ಮಾಧ್ಯಮದಲ್ಲಿ ಬೋಧನೆ ಆರಂಭಿಸಿರುವುದೇ ಇದಕ್ಕೆ ಕಾರಣ’ ಎಂದು ಇಲಾಖೆ ಹೇಳಿಕೊಂಡಿದೆ. ಇದು ನಿಜವಾಗಿದ್ದರೆ ಬಹಳ ಸಂತೋಷ. ಆದರೆ, ಇದರ ನಡುವೆಯೇ ಖಾಸಗಿ ಶಾಲೆಗಳಿಂದ ಅರ್ಜಿ ಸ್ವೀಕರಿಸಿ ಅನುಮತಿ ನೀಡಲು ಇಲಾಖೆಯು ಹೊಸ ವ್ಯವಸ್ಥೆಯನ್ನು ಅಭಿವೃದ್ಧಿ ಪಡಿಸಿರುವುದು ವಿಪರ್ಯಾಸ.

ಹಾಗೆಯೇ, ಖಾಸಗಿ ಶಾಲೆಗಳ ಜೊತೆ ಪೈಪೋಟಿಗೆ ನಿಂತು ಸರ್ಕಾರಿ ಶಾಲೆಗಳಲ್ಲಿ ಇಂಗ್ಲಿಷ್ ಮಾಧ್ಯಮದಲ್ಲಿ ಬೋಧನೆ ಆರಂಭಿಸಿರುವುದು ಮಕ್ಕಳ ಸಾರ್ಥಕ ಶಿಕ್ಷಣಕ್ಕೆ ಪೂರಕವೇನಲ್ಲ. ನೀರಿಳಿಯದ ಗಂಟಲಲ್ಲಿ ಕಡುಬು ತುರುಕುವ ಪ್ರಯತ್ನ ಮಾಡುವುದಕ್ಕಿಂತ, ಕನ್ನಡ ಮಾಧ್ಯಮದಲ್ಲೇ ಬೋಧನೆ ಮುಂದುವರಿಸಿ, ಇಂಗ್ಲಿಷ್ ಭಾಷೆಯನ್ನು ಚೆನ್ನಾಗಿ ಕಲಿಸಿ ಶಾಲೆಗಳ ಸೌಕರ್ಯವನ್ನು ಉತ್ತಮಪಡಿಸುವುದು ವಿವೇಕದ ಕ್ರಮವಾದೀತು.
-ಫಾಲಾಕ್ಷಯ್ಯ, ಬೆಂಗಳೂರು

 

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !