ಮಂಗಳವಾರ, ನವೆಂಬರ್ 12, 2019
26 °C

ಕಲಾ ಸಮುಚ್ಚಯ ದುರಸ್ತಿಪಡಿಸಿ

Published:
Updated:

ಬೆಂಗಳೂರಿನ ಕಲಾಗ್ರಾಮದಲ್ಲಿರುವ ಕಲಾ ಸಮುಚ್ಚಯವು ಪಶ್ಚಿಮ ಬೆಂಗಳೂರಿಗರಿಗೆ ಸಾಂಸ್ಕೃತಿಕ ಕೇಂದ್ರವಾಗಿದೆ. ನಾಟಕ, ಸಂಗೀತಾದಿ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಲು ಉತ್ತಮ ವೇದಿಕೆಯಾಗಿದೆ.

ಆದರೆ ವಿದ್ಯುತ್ ಅವಘಡದಿಂದ ಕಲಾಸಮುಚ್ಚಯವನ್ನು ಒಂದು ವರ್ಷದಿಂದ ಮುಚ್ಚಿರುವುದರಿಂದ ಸಂಘ–ಸಂಸ್ಥೆಗಳಿಗೆ, ನಾಟಕ ತಂಡಗಳಿಗೆ ತೊಂದರೆಯಾಗಿದೆ. ಕಲಾಸಕ್ತರಿಗೆ ನಿರಾಸೆಯಾಗಿದೆ. ಸಂಬಂಧಿಸಿದ ಇಲಾಖೆಯವರು ಮನಸ್ಸು ಮಾಡಿದ್ದರೆ ಒಂದು ದಿನದಲ್ಲಿ ಇದನ್ನು ದುರಸ್ತಿಪಡಿಸಬಹುದಿತ್ತು. ಆದರೆ ಇಲಾಖೆ ಮತ್ತು ವಿವಿಧ ಅಕಾಡೆಮಿಗಳು ಅವಘಡಕ್ಕೆ ಸಂಬಂಧಿಸಿದಂತೆ ಪರಸ್ಪರ ದೂಷಣೆಯಲ್ಲಿ ತೊಡಗಿವೆಯೇ ಹೊರತು ದುರಸ್ತಿಗೆ ಮುಂದಾಗುತ್ತಿಲ್ಲ.

ಈಗಲಾದರೂ ಮೀನ ಮೇಷ ಎಣಿಸದೆ ಕಲಾ ಸಮುಚ್ಚಯವನ್ನು ದುರಸ್ತಿಪಡಿಸಿ ಕಲಾಸಕ್ತರ ನೆರವಿಗೆ ಬರಬೇಕು.
-ರುದ್ರೇಶ್ ಅದರಂಗಿ, ಬೆಂಗಳೂರು

 

ಪ್ರತಿಕ್ರಿಯಿಸಿ (+)