ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಲಸಿಗರ ಶೋಷಣೆ ತಪ್ಪಿಸಲು ಸಕಾಲ

Last Updated 7 ಮೇ 2020, 20:15 IST
ಅಕ್ಷರ ಗಾತ್ರ

ವಲಸೆ ಕಾರ್ಮಿಕರು ಲಕ್ಷಾಂತರ ಸಂಖ್ಯೆಯಲ್ಲಿ ಮನೆಗೆ ಹಿಂತಿರುಗುವ ಪರಿಸ್ಥಿತಿ ಬಂದಿದ್ದು ವಿಷಾದನೀಯ ಬೆಳವಣಿಗೆ. ಹಾಗೆಯೇ ಅವರು ವಾಪಸ್‌ ತೆರಳುವುದಕ್ಕೆ ಪರೋಕ್ಷವಾಗಿ ತಡೆಯೊಡ್ಡುವ ರೀತಿಯಲ್ಲಿ ರೈಲು ಸೇವೆ ರದ್ದುಪಡಿಸಿರುವುದೂ ಸರಿಯಾದ ಕ್ರಮವಲ್ಲ.

ಇದು, ಈ ರಾಜ್ಯದಲ್ಲಿ ಕಾರ್ಮಿಕರು ಇಲ್ಲ ಮತ್ತು ಇಲ್ಲಿಗೆ ವಲಸೆ ಕಾರ್ಮಿಕರು ಅನಿವಾರ್ಯ ಎನ್ನುವ ಹತಾಶ ಸ್ಥಿತಿಯನ್ನು ತೋರಿಸುತ್ತದೆ.

ಈ ಬೆಳವಣಿಗೆಯನ್ನು ಸ್ಥಳೀಯ ಕಾರ್ಮಿಕರಿಗೆ ಉದ್ಯೋಗ ನೀಡಲು ಬಳಸಿಕೊಳ್ಳಬೇಕು ಮತ್ತು ಅವರಿಗೆ ಕೌಶಲ ತರಬೇತಿ ಕೊಡಬೇಕು. ಕಟ್ಟಡ ನಿರ್ಮಾಣ ಸಂಸ್ಥೆಗಳು ಲಾಭದ ಆಸೆಗಾಗಿ ಕಡಿಮೆ ಕೂಲಿಗೆ ವಲಸೆ ಕಾರ್ಮಿಕರನ್ನು ಬಳಸಿಕೊಳ್ಳುವುದನ್ನು ನಿಯಂತ್ರಿಸಲು ಇದು ಸಕಾಲ.

-ರಮಾನಂದ ಶರ್ಮಾ,ಬೆಂಗಳೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT