ಬುಧವಾರ, ಜೂಲೈ 8, 2020
28 °C

ಮೃಗಾಲಯ ತೆರವಿಗೆ ಚಿಂತಿಸಲಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಲಾಕ್‍ಡೌನ್‌ನಿಂದ ಮನೆಯೊಳಗೆ ಬಂದಿಯಾಗಿರುವವರಲ್ಲಿ ಹಲವರು ಮಾನಸಿಕ ಒತ್ತಡಕ್ಕೆ ಒಳಗಾಗಿದ್ದಾರೆ. ಹೀಗಿರುವಾಗ, ದೇಶದ ಹತ್ತಾರು ಮೃಗಾಲಯಗಳಲ್ಲಿ ಬಂಧಿಸಿಟ್ಟಿರುವ ನಾನಾ ತಳಿಯ ಪ್ರಾಣಿ– ಪಕ್ಷಿಗಳನ್ನು ನೆನೆಸಿಕೊಂಡರೆ ಅಯ್ಯೋ ಎನಿಸದಿರದು.

ವನ್ಯಜೀವಿಗಳು ಕಾಡುಮೇಡುಗಳಲ್ಲಿ ಸ್ವಚ್ಛಂದವಾಗಿ ಬದುಕುವಂತಹವು. ಮನುಷ್ಯನು ಪ್ರಾಣಿಗಳನ್ನು ನೋಡಬಯಸುವುದಾದರೆ, ಈಗಾಗಲೇ ಇರುವ ಸಫಾರಿಗಳನ್ನು ಬಳಸಿಕೊಳ್ಳಲು ಉತ್ತೇಜಿಸಬೇಕು.

ಆಗ ಪ್ರಾಣಿಗಳನ್ನು ಕಾಡಿನೊಳಗೆ ಸ್ವತಂತ್ರವಾಗಿ ಓಡಾಡುವ ಕ್ರಿಯೆಯಲ್ಲಿಯೇ ಕಾಣಬಹುದು. ಇದರಿಂದ ಪ್ರಾಣಿಗಳ ಸ್ವಾತಂತ್ರ್ಯ ಮತ್ತು ಮನುಷ್ಯನ ಪ್ರಾಣಿ ವೀಕ್ಷಣೆ ಬಯಕೆ ಎರಡಕ್ಕೂ ಧಕ್ಕೆಯಾಗದು. ಹಾಗಾಗಿ, ಮೃಗಾಲಯಗಳನ್ನು ತೆರವುಗೊಳಿಸುವ ನಿಟ್ಟಿನಲ್ಲಿ ಸರ್ಕಾರ ಚಿಂತಿಸುವುದು ಒಳಿತು.

-ಪುನೀತ್ ಎನ್., ಮೈಸೂರು

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.