ಶುಕ್ರವಾರ, ಮೇ 29, 2020
27 °C

ಜನಪ್ರತಿನಿಧಿಗಳಿಗೂ ಇರಲಿ ಕಡಿವಾಣ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸರ್ಕಾರಿ ನೌಕರರಲ್ಲಿ ಇನ್ನಷ್ಟು ಶಿಸ್ತು ಮೂಡಿಸಲು ಕರ್ನಾಟಕ ನಾಗರಿಕ ಸೇವಾ (ವರ್ಗೀಕರಣ, ನಿಯಂತ್ರಣ ಮತ್ತು ಮೇಲ್ಮನವಿ) ನಿಯಮ– 1957ಕ್ಕೆ ತಿದ್ದುಪಡಿ ತರಲು ರಾಜ್ಯ ಸರ್ಕಾರ ಮುಂದಾಗಿರುವುದು ಉತ್ತಮ ಕ್ರಮವಾಗಿದೆ. ಆದರೆ ಇಂತಹ ಕಟ್ಟುನಿಟ್ಟಿನ ಕ್ರಮಗಳನ್ನು ಸರ್ಕಾರಿ ನೌಕರರಿಗೆ ಮಾತ್ರ ಜಾರಿಗೊಳಿಸದೆ, ರಾಜಕೀಯ ವ್ಯಕ್ತಿಗಳಿಗೂ ಅನ್ವಯಿಸಬೇಕು.‌

ಎರಡನೇ ಮದುವೆ ಆಗಬಾರದು, ಸಿನಿಮಾದಲ್ಲಿ ಅಭಿನಯಿಸಬಾರದು, ಅಧಿಕಾರಿಗಳಿಂದ ಹಣ‌ ಪಡೆದು ವರ್ಗಾವಣೆಗೆ ಸಂಬಂಧಿಸಿದಂತೆ ಯಾವುದೇ ಒತ್ತಡ ಹೇರಬಾರದು, ಒಂದು ಚುನಾವಣೆಯಲ್ಲಿ ಎರಡು ಕ್ಷೇತ್ರಗಳಲ್ಲಿ ಸ್ಪರ್ಧಿಸಿದರೆ, ಅದಕ್ಕೆ ತಗಲುವ ಖರ್ಚು ವೆಚ್ಚವನ್ನು ಸ್ವಯಂ ಭರಿಸಬೇಕು, ಒಮ್ಮೆ ಗೆದ್ದಂತಹವರು ಜೀವನಪೂರ್ತಿ ಪಿಂಚಣಿ ಪಡೆಯಲು ಅರ್ಹರಲ್ಲ, ಉತ್ತಮ ಕೆಲಸ ಮಾಡಿದರಷ್ಟೇ ಸಚಿವರಾಗಲು ಅರ್ಹತೆ, ಇಲ್ಲವಾದರೆ ಹಿಂಬಡ್ತಿ ಪಡೆದು ಬೇರೆಯವರಿಗೆ ಅವಕಾಶ ನೀಡಲು ಸಹಕರಿಸುವಂತಹ ವಿಷಯಗಳನ್ನು ಒಳಗೊಂಡ ಕಾನೂನು ರಚಿಸಬೇಕು. ಏಕೆಂದರೆ, ಬೇಲಿ ಭದ್ರವಾಗಿದ್ದರೆ ಮಾತ್ರ ಫಸಲಿಗೆ ಹಾನಿಯಾಗದಂತೆ ನೋಡಿಕೊಳ್ಳಲು ಸಾಧ್ಯ ಅಲ್ಲವೇ?

ಚೆಲುವರಾಜು ಕೆ., ಧನಗೆರೆ, ಕೊಳ್ಳೇಗಾಲ

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.