ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೈಕಲ್‌ಪ್ರೇಮಿಗಳಿಗೆ ನೋವಿನ ಸಂಗತಿ

Last Updated 7 ಜೂನ್ 2020, 18:42 IST
ಅಕ್ಷರ ಗಾತ್ರ

ಮೊನ್ನೆ ಮೊನ್ನೆ ‘₹ 12 ಲಕ್ಷ ಬೆಲೆಯ ಸೈಕಲ್ ಮಾರುಕಟ್ಟೆಗೆ’ ಎಂಬ ಚಿತ್ರಸಹಿತ ಸುದ್ದಿ ಓದಿದ್ದೆ. ಕೊಳ್ಳಲಾಗದಿದ್ದರೂ ಸುದ್ದಿ ನೋಡಿಯೇ ಸಂತಸಪಟ್ಟಿದ್ದೆ! ಈಗ ಬೇಸರದ ಸಂಗತಿ ಎಂದರೆ, ಖ್ಯಾತ ಸೈಕಲ್ ಕಂಪನಿ ಅಟ್ಲಾಸ್, ದೆಹಲಿ ಹೊರವಲಯದಲ್ಲಿರುವ ತನ್ನ ಕೊನೇ ಉತ್ಪಾದನಾ ಘಟಕವನ್ನು ಆರ್ಥಿಕ ಸಂಕಷ್ಟದಿಂದ ಮುಚ್ಚಲು ನಿರ್ಧರಿಸಿರುವ ಸುದ್ದಿ. ಅದೂ ‘ವಿಶ್ವ ಸೈಕಲ್’ ದಿನಾಚರಣೆ ಸಂದರ್ಭದಲ್ಲೇ! ಇದರಿಂದ, ಒಂದು ಸಾವಿರ ಮಂದಿ ಉದ್ಯೋಗ ಕಳೆದುಕೊಳ್ಳಲಿದ್ದಾರೆ.

ಮುಖ್ಯವಾಗಿ ಯಾವುದೇ ದ್ವಿಚಕ್ರ ವಾಹನ ಕಲಿಯಲು, ಚಿಕ್ಕವರಿದ್ದಾಗ ‘ಸೈಕಲ್’ ಬಿಡುವುದನ್ನು ಕಲಿತಿದ್ದರೆ ‘ಬ್ಯಾಲೆನ್ಸ್’ ತಳಹದಿಯೇ. ಆರ್ಥಿಕವಾಗಿ ಸಬಲರಲ್ಲದವರು ದೈನಂದಿನ ಕಾಯಕಕ್ಕೆ ಇಂದಿಗೂ ಸೈಕಲ್‌ ಅನ್ನೇ ಅವಲಂಬಿಸಿದ್ದಾರೆ. ಇಂತಹ ‘ಬಡವರ ಬಂಧು’ವಾದ ಪರಿಸರಸ್ನೇಹಿ ಸೈಕಲ್ ಘಟಕವನ್ನು ಮುಚ್ಚುತ್ತಿರುವುದು ನೋವಿನ ಸಂಗತಿ.

-ನಗರ ಗುರುದೇವ್ ಭಂಡಾರ್ಕರ್,ಹೊಸನಗರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT